Saturday, September 19, 2026

BDA Apartments

Home Front Page ಕಾವೇರಿ ವಿವಾದ: ಸುಪ್ರೀಂ ಮೊರೆ ಹೋಗಲು ತಮಿಳುನಾಡು ಸಿದ್ದತೆ ನಡೆಸಿದೆ- ಸಿಎಂ ಡಿಕೆ ಶಿವಕುಮಾರ್

ಕಾವೇರಿ ವಿವಾದ: ಸುಪ್ರೀಂ ಮೊರೆ ಹೋಗಲು ತಮಿಳುನಾಡು ಸಿದ್ದತೆ ನಡೆಸಿದೆ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಆಗಸ್ಟ್,1,2026 (www.justkannada.in):  15 ದಿನಗಳವರೆಗೆ ಪ್ರತಿದಿನ 3500 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶಕ್ಕೆ  ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಆಗಸ್ಟ್ 13ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

ಈ ಮಧ್ಯೆ ಕಾವೇರಿ ನೀರು ಬಿಡದ ಹಿನ್ನೆಲೆಯಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಿದ್ದತೆ ನಡೆಸುತ್ತಿದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಕಾವೇರಿ ವಿವಾದ krs krs 1

ಈ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ತಮಿಳುನಾಡಿಗೆ ಇನ್ನೂ ನೀರು ಬಿಟ್ಟಿಲ್ಲ. ಡ್ಯಾಂ ತುಂಬುವ ಸ್ಥಿತಿಯಲ್ಲಿ ಇದೆ.  ಹೀಗಾಗಿ ನೀರು ಬಿಡಬೇಕಾಗುತ್ತೆ. ಬಿಜೆಪಿಯವರು ಆರೋಪ ಮಾಡುತ್ತಾ ಇರುತ್ತಾರೆ. ಸರ್ವಪಕ್ಷ ಸಭೆ ಕರೆಯಲು ಬಿಜೆಪಿಯವರೇ ಸಲಹೆ ಕೊಟ್ಟಿದ್ದು.  ತಮಿಳುನಾಡು ಸುಪ್ರೀಂಕೋರ್ಟ್  ಮೊರೆ ಹೋಗಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದರು.ಸುಪ್ರೀಂ ಮೊರೆ ಹೋಗಲು ತಮಿಳುನಾಡು ಸಿದ್ದತೆ ನಡೆಸಿದೆ jk02_new jk02 new

Key words: Cauvery dispute, Tamil Nadu, ready, Supreme Court, CM, DK Shivakumar