ಶಿವಮೊಗ್ಗ,ಜುಲೈ,30,2026 (www.justkannada.in): ರಾಜ್ಯದ ಗೃಹ ಇಲಾಖೆ ಡ್ರಗ್ಸ್ ದಂಧೆ ಕೊಲೆ ಸುಲಿಗೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇವಲ ಬಿಜೆಪಿಗರ ಭಾಷಣ ಹುಡುಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ವಿ.ಸುನೀಲ್ ಕುಮಾರ್, ರಾಜ್ಯದ ಗೃಹ ಇಲಾಖೆ ಫೇಸ್ ಬುಕ್ ವಾಟ್ಸಪ್ ಗೆ ಸೀಮಿತ. ಇದರಿಂದ ರಾಜ್ಯದಲ್ಲಿ ಹೊಸ ಇಲಾಖೆ ಕೂಡ ಹುಟ್ಟಿಕೊಂಡಂತಾಗಿದೆ. ಗೃಹ ಇಲಾಖೆ ಎಂಬುದು ಇವತ್ತು ಇಲ್ಲವೇ ಇಲ್ಲ. ಗೃಹ ಇಲಾಖೆ ಡ್ರಗ್ಸ್ ದಂಧೆ ಕೊಲೆ ಸುಲಿಗೆ ಬಗ್ಗೆ ತಲೆಕೆಡಿಸಿಕೊಳ್ಳುತಿಲ್ಲ. ಕೇವಲ ಬಿಜೆಪಿಗರ ಭಾಷಣ ಹುಡುಕುವ ಕೆಲಸ ಮಾಡುತ್ತಿದೆ. ಇಲಾಖೆ ಈ ರೀತಿ ಮಾರ್ಪಾಡಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದರು.
ಎಂಎಲ್ ಸಿ ಸಿಟಿ ರವಿ, ಶಾಸಕ ಯಶ್ ಪಾಲ್ ಗೆ ನೋಟಿಸ್ ನೀಡಿರುವುದು ವಿಷಾದಕರ. ನೋಟಿಸ್ ನಿಂದ ಹೆದರಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ನಾವು ಗೋಲಿಬಾರ್ ಲಾಠಿಚಾರ್ಜ್ ಗೆ ಹೆದರಲ್ಲ ಇನ್ನು ಈ ರೀತಿಯ ಬೆದರಿಕೆಗಳಿಗೆ ನಾವು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ. ಇನ್ನೂ ಒಂದುವರೆ ವರ್ಷಗಳ ಕಾಲ ರಾಜ್ಯದ ಜನರು ಸಹಿಸಿಕೊಳ್ಳಬೇಕು. 2028ರ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಉತ್ತರವನ್ನ ನೀಡಲಿದ್ದಾರೆ ಎಂದು ವಿ. ಸುನೀಲ್ ಕುಮಾರ್ ಹೇಳಿದರು.
Key words: Home Department, busy, BJP speeches, MLA, Sunil Kumar






