Wednesday, July 29, 2026

BDA Apartments

Home Front Page ರಾಜ್ಯದಲ್ಲಿ ಮತ್ತೆ ‘ಕಾವೇರಿ’ ಕಿಚ್ಚು: CWRC ಆದೇಶ ವಿರುದ್ದ ಕರವೇ ಪ್ರತಿಭಟನೆ ,ಆಕ್ರೋಶ

ರಾಜ್ಯದಲ್ಲಿ ಮತ್ತೆ ‘ಕಾವೇರಿ’ ಕಿಚ್ಚು: CWRC ಆದೇಶ ವಿರುದ್ದ ಕರವೇ ಪ್ರತಿಭಟನೆ ,ಆಕ್ರೋಶ

ಬೆಂಗಳೂರು,ಜುಲೈ,29,2026 (www.justkannada.in): ರಾಜ್ಯದಲ್ಲಿ ಮತ್ತೆ ಕಾವೇರಿ ಹೋರಾಟದ ಕಿಚ್ಚು ಭುಗಿಲೆದ್ದಿದ್ದು, ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ  ಮಲ್ಲೇಶ್ವರಂನಲ್ಲಿ ಕರವೇ ಶಿವರಾಮೇಗೌಡ ನೇತೃತ್ವದಲ್ಲಿ ಕಾರ್ಯಕರ್ತರು  ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.   ಈ ವೇಳೆ ಪ್ರತಿಭಟನೆಗೆ ಅವಕಾಶ ನೀಡದೇ ಪೊಲೀಸರು ಶಿವರಾಮೇಗೌಡ, ಸಾರಾ ಗೋವಿಂದು ಅವರನ್ನ ಸೇರಿ ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆದು ಬಿಎಂಟಿಸಿ ಬಸ್ ನಲ್ಲಿ ಕೊಂಡೊಯ್ದರು.

ಇತ್ತ ಫ್ರೀಡಂಪಾರ್ಕ್ ನಲ್ಲಿ ಕರವೇ ನಾರಾಯಣಗೌಡಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ನಾರಾಯಣಗೌಡರು, ಸಿಎಂ ರಾಜ್ಯದ ಹಿತ ಕಾಪಾಡಬೇಕು ತಮಿಳುನಾಡಿಗೆ ನೀರು ಹರಿಸಿದರೇ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: Cauvery water, karave, Protests, against, CWRC, order