Monday, September 14, 2026

BDA Apartments

Home Front Page ತಮಿಳುನಾಡಿಗೆ ನೀರು ಬಿಡುವಂತೆ CWRC  ಆದೇಶ ಅವೈಜ್ಞಾನಿಕ- ಬಡಗಲಪುರ ನಾಗೇಂದ್ರ ಕಿಡಿ

ತಮಿಳುನಾಡಿಗೆ ನೀರು ಬಿಡುವಂತೆ CWRC  ಆದೇಶ ಅವೈಜ್ಞಾನಿಕ- ಬಡಗಲಪುರ ನಾಗೇಂದ್ರ ಕಿಡಿ

ಮೈಸೂರು,ಜುಲೈ.29,2026 (www.justkannada.in):  ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಕೆಆರ್ ಎಸ್ ಜಲಾಶಯ ಭರ್ತಿಯಾಗದೇ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶದ ವಿರುದ್ದ ರಾಜ್ಯದಲ್ಲಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ರೈತಮುಖಂಡ ಬಡಗಲಪುರ ನಾಗೇಂದ್ರ, ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಅದೇಶ ಅವೈಜ್ಞಾನಿಕವಾದುದು .  ಆ ಆದೇಶ ವಿರೋಧಿಸುತ್ತೇವೆ. ರಾಜ್ಯದ 157 ತಾಲ್ಲೂಕುಗಳಲ್ಲಿ ಬರವಿದೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಕಡಿಮೆ ಇದೆ. ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ರೈತರ ಹಿತ ಕಾಯಲು ಎಲ್ಲ ಪಕ್ಷಗಳು  ಒಂದಾಗಬೇಕು ಎಂದು ತಿಳಿಸಿದ್ದಾರೆ.ತಮಿಳುನಾಡಿಗೆ ನೀರು ಬಿಡುವಂತೆ CWRC ಆದೇಶ ಅವೈಜ್ಞಾನಿಕ jk02_new jk02 new

Key words: CWRC, order, release, water, Tamil Nadu, unscientific, Badagalapura Nagendra