Sunday, September 13, 2026

BDA Apartments

Home Front Page 1975ರ ತುರ್ತು ಪರಿಸ್ಥಿತಿ: ಭಾರತದ ಪ್ರಜಾಪ್ರಭುತ್ವದ ಇತಿಹಾಸದ ಒಂದು ಮಹತ್ವದ ಅಧ್ಯಾಯ-ಕೃಷ್ಣಪ್ರಸಾದ್

1975ರ ತುರ್ತು ಪರಿಸ್ಥಿತಿ: ಭಾರತದ ಪ್ರಜಾಪ್ರಭುತ್ವದ ಇತಿಹಾಸದ ಒಂದು ಮಹತ್ವದ ಅಧ್ಯಾಯ-ಕೃಷ್ಣಪ್ರಸಾದ್

ಬೆಂಗಳೂರು, ಜುಲೈ,28, 2026 (www.justkannada.in): 1975ರ ತುರ್ತು ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವದ ಇತಿಹಾಸದ ಒಂದು ಮಹತ್ವದ ಅಧ್ಯಾಯ ಎಂದು  ದಿ ಹಿಂದೂ ಪತ್ರಿಕೆಯ ಮಾಜಿ ಗ್ರೂಪ್ ಎಡಿಟೋರಿಯಲ್ ಅಧಿಕಾರಿ ಹಾಗೂ ಔಟ್ ಲುಕ್ ಪತ್ರಿಕೆಯ ಮಾಜಿ ಮುಖ್ಯ ಸಂಪಾದಕ ಕೃಷ್ಣ ಪ್ರಸಾದ್ ತಿಳಿಸಿದರು.

ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ)ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು, ಸಿಎಂಎಸ್ ಲಾಲ್‌ ಬಾಗ್ ರಸ್ತೆ ಕ್ಯಾಂಪಸ್‌ ನಲ್ಲಿ BAJ ಮತ್ತು MAJ ವಿದ್ಯಾರ್ಥಿಗಳಿಗಾಗಿ “1975ರ ತುರ್ತು ಪರಿಸ್ಥಿತಿ: ಹಿನ್ನೆಲೆ, ಘೋಷಣೆ ಮತ್ತು ಇಂದಿನ ಸಂದರ್ಭಗಳು” ಎಂಬ ವಿಷಯದ ಕುರಿತು ಆಯೋಜಿಸಿದ್ದ  ಮಾಧ್ಯಮ ಉಪನ್ಯಾಸ ಸರಣಿಯಲ್ಲಿ ಕೃಷ್ಣ ಪ್ರಸಾದ್ ಮಾತನಾಡಿದರು.

ಜೂನ್ 25 ಎಂಬ ದಿನಾಂಕವನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದನ್ನು ನಿಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳಿ. ಜೂನ್ 25ನೇ ದಿನವೇ ಭಾರತದಲ್ಲಿ ಮೊದಲ ಸರ್ವಾಧಿಕಾರ ಆಡಳಿತ ಆರಂಭವಾಯಿತು.  ರಾಜಕೀಯ ಉದ್ವಿಗ್ನತೆ ಹೆಚ್ಚಾದ ಸಂದರ್ಭದಲ್ಲಿ, ಸಿದ್ಧಾರ್ಥ ಶಂಕರ್ ರೇ ಅವರು ಭಾರತದ ಸಂವಿಧಾನದ 352ನೇ ವಿಧಿಯಡಿ ತುರ್ತು ಪರಿಸ್ಥಿತಿಯನ್ನು ಘೋಷಿಸುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ ನೀಡಿದರು. ಅಧಿಕೃತ ಘೋಷಣೆಯಲ್ಲಿ, “ಭಾರತದ ಭದ್ರತೆಗೆ ಆಂತರಿಕ ಅಶಾಂತಿಯಿಂದ ತಕ್ಷಣದ ಅಪಾಯವಿದೆ ಎಂಬ ಮಾಹಿತಿ ನಮಗೆ ದೊರೆತಿದೆ” ಎಂದು ತಿಳಿಸಲಾಗಿತ್ತು. 1975ರ ಜೂನ್ 25ರಂದು ರಾತ್ರಿ ಸುಮಾರು 11:45ಕ್ಕೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಎಂದು ವಿವರಿಸಿದರು.1975ರ ತುರ್ತು ಪರಿಸ್ಥಿತಿ BDA JK_Adv BDA Adv

ತುರ್ತು ಪರಿಸ್ಥಿತಿಯ ಸಮಯದಲ್ಲಿ ಮೌಲಿಕ ಹಕ್ಕುಗಳ ಅಮಾನತು, ಬಂಧನಗಳು ಮತ್ತು ಮಾಧ್ಯಮದ ಮೇಲಿನ ಸೆನ್ಸಾರ್ ಕುರಿತು ಚರ್ಚಿಸಲಾಯಿತು. ದೆಹಲಿಯ ಪತ್ರಿಕೆ ಕಚೇರಿಗಳಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದರಿಂದ ಮುದ್ರಣ ಯಂತ್ರಗಳು ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಮಾಧ್ಯಮದ ಮೇಲಿನ ಸೆನ್ಸಾರ್ ನಡುವೆಯೂ ಆ ಪತ್ರಿಕೆ ಪತ್ರಿಕೋದ್ಯಮದ ಮಹತ್ವದ ಉದಾಹರಣೆಯಾಗಿ ಹೊರಹೊಮ್ಮಿತು. ಕೆ. ಆರ್. ಮಲ್ಕಾನಿಯವರೇ ತುರ್ತು ಪರಿಸ್ಥಿತಿಯ ವೇಳೆ ಬಂಧಿತರಾದ ಮೊದಲ ಪತ್ರಕರ್ತರಾಗಿದ್ದರು ಎಂದು ತಿಳಿಸಿದರು.ಭಾರತದ ಪ್ರಜಾಪ್ರಭುತ್ವದ ಇತಿಹಾಸದ ಒಂದು ಮಹತ್ವದ ಅಧ್ಯಾಯ jain1

“ನಿಮ್ಮ ದೃಷ್ಟಿಯನ್ನು ಕೇವಲ  ಇಂಡಿಯನ್ ಎಕ್ಸ್ ಪತ್ರಿಕೆಗೆ ಮಾತ್ರ ಸೀಮಿತಗೊಳಿಸಬೇಡಿ. ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಸ್ವತಂತ್ರ ಪತ್ರಿಕೋದ್ಯಮದ ಪಾತ್ರವನ್ನು ಗುರುತಿಸುವುದು ಅಗತ್ಯ ಎಂದು ಅವರು ಹೇಳಿದರು.

ಉಪನ್ಯಾಸದ  ವೇಳೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಭಾರ್ಗವಿ ಡಿ. ಹೆಮ್ಮಿಗೆ ಅವರು  ಪಾಲ್ಗೊಂಡಿದ್ದರು.

Key words: Emergency of 1975, Indian Democracy, Krishnaprasad, Jain University