ಕಾಟಾಚಾರಕ್ಕೆ ಬರ ಪರಿಶೀಲನೆ, ಈಗ ಸಿಎಂ ದೆಹಲಿಗೆ ಓಡಿ ಹೋಗಿದ್ದಾರೆ- ಆರ್.ಅಶೋಕ್ ಕಿಡಿ

ಬೆಂಗಳೂರು,ಜುಲೈ,27,2026 (www.justkannda.in): ಬುಧವಾರದಿಂದ ನಾವು ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಬರ ಬಂದು ಹಾಹಾಕಾರ ಇದ್ದರೂ ಸರ್ಕಾರಕ್ರಮ ಕೈಗೊಂಡಿಲ್ಲ.  ಸಿಎಂ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಹಣ ಬಿಡುಗಡೆ ಮಾಡಬೇಕಿತ್ತು ಕಾಟಾಚಾರಕ್ಕೆ ಜಿಲ್ಲೆಗಳಿಗೆ ಹೊಗಿ ಸಿಎಂ ಈಗ ದೆಹಲಿಗೆ ಓಡಿ ಹೋಗಿದ್ದಾರೆ. ಬುಧವಾರದಿಂದ ನಾನು ಬರೊಪೀಡಿತ ಪ್ರದೇಶಕ್ಕೆ ಭೇಟಿ  ನೀಡಿ ಪರಿಶೀಲಿಸುತ್ತೇನೆ. ಬರಪೀಡಿತ ಎಂದು ಘೋಷಿಸದಿದ್ದರೇ ಕೇಂದ್ರದ ತಂಡ ಹೇಗೆ ಬರುತ್ತದೆ? ಎಂದು  ವಾಗ್ದಾಳಿ ನಡೆಸಿದರು.

ಸಿಟಿ ರವಿಯನ್ನು ಮುಟ್ಟಿ ನೋಡೋಣ

ಎಂಎಲ್ ಸಿ ಸಿಟಿ ರವಿ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಚುನಾವಣೆ ಹತ್ತಿರ ಬರುವಾಗ ನಮ್ಮನ್ನು ಜೈಲಿಗೆ ಹಾಕುವ ಹುನ್ನಾರ ನಡೆಸುತ್ತಿದೆ.  ಕಾಂಗ್ರೆಸ್ ನವರಿಗೆ ಚುನಾವಣೆ ಎದುರಿಸುವ ಧೈರ್ಯ ಇಲ್ಲ. ಬೆಂಗಳೂರಿನಲ್ಲಿ ಉಮರ್ ಖಾಲಿದ್ ಪರ ಪೋಸ್ಟರ್ ಹಿಡಿದಿದ್ದರು. ಇದು ಯಾವುದೂ ಸರ್ಕಾರದ ಕಣ್ಣಿಗೆ ಕಾಣಿಸಿಲ್ಲ. ಸಿಟಿ ರವಿಯನ್ನು ಮುಟ್ಟಿ ನೋಡೋಣ. ಆದರ ಪ್ರತಿಫಲ ಏನಾಗುತ್ತದೆ ಅಂತಾ ಅ ಮೇಲೆ ಗೊತ್ತಾಗುತ್ತದೆ. ಚಿಕ್ಕಮಗಳೂರಿನಲ್ಲಿ ಮೂರ್ನಾಲ್ಕು ದಿನಗಳಲ್ಲಿ  ಹೋರಾಟ ಮಾಡುತ್ತೇವೆ ಎಂದರು.

Key words: Drought, CM DK Shivakumar, Delhi, R. Ashok