ಕಾಸರಗೂಡು,ಜುಲೈ,22,2026 (www.justkannada.in): ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರೂ.200.00 ಲಕ್ಷಗಳ ಅನುದಾನದಲ್ಲಿ ಡಾ. ಕಯ್ಯಾರ ಕಿಞ್ಞಣ್ಣರೈರವರ ಹೆಸರಿನಲ್ಲಿ ಕಾಸರಗೋಡಿನ ಬದಿಯಡ್ಕ ಗ್ರಾಮದಲ್ಲಿ ನಿರ್ಮಿಸಲಾದ ಕನ್ನಡಭವನದ ಉದ್ಘಾಟನೆಗೆ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಆಹ್ವಾನ ನೀಡಲಾಯಿತು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ಕೇರಳ ಸಿಎಂ ವಿ.ಡಿ. ಸತೀಶನ್ ಅವರನ್ನು ಭೇಟಿ ಮಾಡಿ ರೂ.200.00 ಲಕ್ಷಗಳ ಅನುದಾನದಲ್ಲಿ ಡಾ.ಕಯ್ಯಾರ ಕಿಞ್ಞಣ್ಣರೈರವರ ಹೆಸರಿನಲ್ಲಿ ಕಾಸರಗೋಡಿನ ಬದಿಯಡ್ಕ ಗ್ರಾಮದಲ್ಲಿ ನಿರ್ಮಿಸಲಾದ ಕನ್ನಡಭವನದ ಉದ್ಘಾಟನಾ ಕಾರ್ಯವನ್ನು ನೆರವೇರಿಸುವಂತೆ ಆಹ್ವಾನಿಸಿದರು.
ಇದೇ ವೇಳೆ ಕಾಸರಗೋಡು ಕನ್ನಡಿಗರ ವಿವಿಧ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಕೇರಳ ಸಿಎಂ ವಿಡಿ ಸತೀಶನ್, ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿವುದಾಗಿ ತಿಳಿಸಿದರು ಹಾಗೂ ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ, ಪ್ರಕಾಶ ಮತ್ತೀಹಳ್ಳಿ, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಡಾ. ಪ್ರಸನ್ನ ರೈ., ಕೇರಳ ಘಟಕದ ಕ.ಸಾ.ಪ. ಅಧ್ಯಕ್ಷ ಜಯಪ್ರಕಾಶ್, ಬದಿಯಡ್ಕ ಸ್ವಾಗತ ಸಮಿತಿ ಅಧ್ಯಕ್ಷರು ಮಾಹಿನ್ ಕೆಲೋಟ್ , Z.A.ಕಯ್ಯಾರ್, ಡಾ. ಮಲ್ಲಿಕಾರ್ಜುನ್ ನಾಶಿ, ಶರೀನ್ ಮೊಹಮ್ಮದ್, ಎ.ಆರ್.ಸುಬ್ಬಯ್ಯಕಟ್ಟೆ, ಸದಸ್ಯರು, ಗಡಿ ಪ್ರಾಧಿಕಾರ ಹಾಗೂ ಇತರೆ ಕೇರಳ ಕನ್ನಡಿಗರು ಉಪಸ್ಥಿತರಿದ್ದರು.
Key words: Kerala CM, V.D. Satheesan, invite, inaugurate, Kannada Bhavan






