Sunday, September 6, 2026

BDA Apartments

Home Front Page ಕೇಂದ್ರದಿಂದ ರಾಹುಲ್ ಗಾಂಧಿ ಅವರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ- ಡಿಸಿಎಂ ಪರಮೇಶ್ವರ್

ಕೇಂದ್ರದಿಂದ ರಾಹುಲ್ ಗಾಂಧಿ ಅವರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ- ಡಿಸಿಎಂ ಪರಮೇಶ್ವರ್

ತುಮಕೂರು,ಜುಲೈ,22,2026 (www.justkannada.in):  ನೀಟ್ ಅಕ್ರಮ, ಅನ್ಯಾಯದ ವಿರುದ್ದ ಕೇಂದ್ರ ಸರ್ಕಾರದ ವಿರುದ್ದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಆಗಿದೆ. ಆದರೆ ರಾಹುಲ್ ಗಾಂಧಿ ಅವರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಿಸಿಎಂ ಪರಮೇಶ್ವರ್, ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗುತ್ತಿರುವಂತಹ ಅನ್ಯಾಯ, ಮೋಸದ ವಿರುದ್ದ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ.  ರಾಹುಲ್ ಗಾಂಧಿ ಪ್ರಿಯಾಂಕಾ ವಾದ್ರಾ ಅವರನ್ನ ಬಂಧಿಸಿದ್ದರು ಪ್ರತಿಭಟನೆ ಸ್ವರೂಪ ಕಾನೂನು ವಿರುದ್ದವಾಗಿ ನಡೆದಿಲ್ಲ  ರಾಹುಲ್ ಗಾಂಧಿ ಅವರ ಧ್ವನಿಯನ್ ಅಡಗಿಸುವ ಪ್ರಯತ್ನ ಮಾಡುತ್ತಿದೆ ಎಂದರು.

ಪ್ರತಿಭಟನೆ ಮುಂದುವರೆಯುತ್ತೆ ಪ್ರಧಾನಿಗಳ ರಾಜೀನಾಮೆ ಕೇಳೋದು ಸಹಜ.  ಅಕ್ರಮದ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಅನ್ನೋದು ಸ್ವಾಭಾವಿಕ.  ತಪ್ಪು ಮಾಡಿದಾಗ ರಾಜೀನಾಮೆ ಕೇಳುವುದು ಸ್ವಾಭಾವಿಕ. ಧರ್ಮೇಂದ್ರ ಪ್ರಧಾನ್ ಕೂಡ ರಾಜೀನಾಮೆ ನೀಡಬೇಕು. ರೈಲು ಅಪಘಾತವಾದಾಗ ಸಚಿವರು ರಾಜೀನಾಮೆ ಕೊಟ್ಟಿದ್ದಾರೆ. ಬೇರೆ ಬೇರೆ ಸಂದರ್ಭಧಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ಎಂದರು.

Key words: NEET, Illegal, injustice, Rahul Gandhi, DCM, Parameshwar