Saturday, September 5, 2026

BDA Apartments

Home Front Page ನೀಟ್ ಪರೀಕ್ಷೆ : ರ್ಯಾಂಕ್ ಪಡೆದು MBBS ಸೀಟ್ ಗೆ ಅರ್ಹತೆ ಗಿಟ್ಟಿಸಿಕೊಂಡ ಮೈಸೂರಿನ ಯಜತ್...

ನೀಟ್ ಪರೀಕ್ಷೆ : ರ್ಯಾಂಕ್ ಪಡೆದು MBBS ಸೀಟ್ ಗೆ ಅರ್ಹತೆ ಗಿಟ್ಟಿಸಿಕೊಂಡ ಮೈಸೂರಿನ ಯಜತ್ ಪರಸ್

ಮೈಸೂರು, ಜೂನ್, 20,2026 (www.justkannada.in): ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆ -2026 ರಲ್ಲಿ ಮೈಸೂರಿನ ಯಜತ್ ಪರಸ್ ಅತ್ಯುತ್ತಮ ರ್ಯಾಂಕ್ ಪಡೆದು ದೇಶದ ಪ್ರತಿಷ್ಠಿತ ವ್ಯೆದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಗೆ ಅರ್ಹತೆ ಪಡೆದಿದ್ದಾರೆ.

ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ  ಇತ್ತೀಚೆಗೆ ನೀಟ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಮೈಸೂರಿನ ಯಜತ್ ಪರಸ್ 99. 9026949 ಪರ್ಸೆಂಟೈಲ್ ಅಂಕಗಳೊಂದಿಗೆ 1895 ಆಲ್ ಇಂಡಿಯಾ ರ್ಯಾಕ್ ಹಾಗೂ ಕೆಟಗರಿಯಲ್ಲಿ 54 ನೇ ರಾಂಕ್ ನೊಂದಿಗೆ ದೇಶದ ಪ್ರತಿಷ್ಠಿತ ವ್ಯೆದ್ಯಕೀಯ ಕಾಲೇಜು ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನಲ್ಲಿ ಎಂಬಿಬಿಎಸ್ ಸೀಟ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಇವರು ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರುಗಳಾದ ಡಾ. ಶೋಭಲತ ಎನ್. ಮತ್ತು ಡಾ. ಪರಶಿವಮೂರ್ತಿ ಎಚ್. ಎಸ್. ದಂಪತಿಯ ಪುತ್ರರಾಗಿದ್ದಾರೆ.

Key words: NEET Exam , Mysore, Yajat Paras, qualifies, MBBS