Monday, September 7, 2026

BDA Apartments

Home Front Page ಬೆಳಗಾವಿಗೆ ಇನ್ನೊಂದು ಮಂತ್ರಿ ಸ್ಥಾನ ಕೇಳಿದ್ದೇವೆ; ಎರಡು ಸ್ಥಾನ ಕೊಟ್ರೆ OK- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿಗೆ ಇನ್ನೊಂದು ಮಂತ್ರಿ ಸ್ಥಾನ ಕೇಳಿದ್ದೇವೆ; ಎರಡು ಸ್ಥಾನ ಕೊಟ್ರೆ OK- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಜುಲೈ,18,2026 (www.justkannada.in):  ಸಚಿವ ಸಂಪುಟ ವಿಸ್ತರಣೆ ವೇಳೆ ಬೆಳಗಾವಿಗೆ ಇನ್ನೊಂದು ಸ್ಥಾನ ಕೇಳಿದ್ದೇವೆ. ಎರಡು ಸ್ಥಾನ ಕೊಟ್ಟರೆ ಒಕೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ , ದೆಹಲಿಗೆ ಹೋಗಿದ್ದವು ಏನೂ ಹೊತ್ತುಕೊಂಡು ಬರಲಿಲ್ಲ. ಸಂಪುಟ ವಿಸ್ತರಣೆ ವಿಚಾರವಾಗಿ ಹೈಕಮಾಮಡ್ ನಿರ್ಧಾರ ಫೈನಲ್ ಆಗುತ್ತದೆ  ಬೆಳಗಾವಿಗೆ ಇನ್ನೊಂದು ಸ್ಥಾನ ಕೇಳಿದ್ದೇವೆ.  2 ಸ್ಥಾನ ಕೊಟ್ಟರೆ ಸರಿ. ಯಾರಿಗೆ ಸಚಿವ ಸ್ತಾನ ಕೊಟ್ಟರೇ ಅನುಕೂಲ ಆಗುತ್ತೆ ಎಂದು ಹೇಳಿದ್ದೇವೆ  ಎಂದರು.

ಖಾಸಗಿ ಏಜೆನ್ಸಿ ಮೂಲಕ ರಾಹುಲ್ ಮಾಹಿತಿ ಸಂಗ್ರಹಿಸಿದ್ದು ಗೊತ್ತಿಲ್ಲ. ಸಣ್ಣಪುಟ್ಟ ಸಮುದಾಯಗಳಿಗೆ ಆದ್ಯತೆ ಕೊಟ್ಟರೆ ಒಳ್ಳೆಯದು ದೆಹಲಿಯಲ್ಲಿ ಮಂತ್ರಿ ಮಂಡಲದ ಬಗ್ಗೆ ಮಾತ್ರ ಚರ್ಚೆ ಆಗಿದೆ. ಜುಲೈ 24 ರಂದು ರಾಹುಲ್ ಗಾಂಧಿ ಬರಬಹುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: another, ministerial post, Belgaum, Minister, Satish Jarkiholi