Wednesday, September 2, 2026

BDA Apartments

Home Front Page ಟೌನ್ ಶಿಪ್ ಯೋಜನೆ ವಿರೋಧಿಸಿ ಬಿಡದಿ ಪಾದಯಾತ್ರೆಗೆ ನಿರ್ಧಾರ- ಬಿವೈ ವಿಜಯೇಂದ್ರ

ಟೌನ್ ಶಿಪ್ ಯೋಜನೆ ವಿರೋಧಿಸಿ ಬಿಡದಿ ಪಾದಯಾತ್ರೆಗೆ ನಿರ್ಧಾರ- ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,17,2026 (www.justkannada.in):  ಬಿಡದಿ ಟೌನ್ ಶಿಪ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಬಿಡದಿ ಪಾದಯಾತ್ರೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಮೈತ್ರಿಪಕ್ಷ ಜೆಡಿಎಸ್ ಜೊತೆಗೂ ಚರ್ಚಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ ಡಿಕೆ ಶಿವಕುಮಾರ್ ರಿಯಲ್ ಎಸ್ಟೇಟ್ ಮಾಡಲು ಹೊರಟಿದ್ದಾರೆ. ಬಿಡದಿ ಪಾದಯಾತ್ರೆ ಯಾವಾಗ ಮಾಡೇಕೆಂದು ನಿರ್ಧರಿಸುತ್ತೇವೆ. ಪಾದಯಾತ್ರೆ ಬಗ್ಗೆ ಮೈತ್ರಿಪಕ್ಷ ಜೆಡಿಎಸ್ ಜೊತೆಗೂ ಚರ್ಚಿಸುತ್ತೇವೆ ಎಂದರು.

ಕನಕಪುರಕ್ಕೆ ಏರ್ ಪೋರ್ಟ್ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ. ತುಮಕೂರಿನಲ್ಲಿ ಏರ್ ಪೋರ್ಟ್ ಮಾಡುವುದರಿಂದ ಅನುಕೂಲ ಮಧ್ಯ ಕರ್ನಟಕ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಆಗಲಿದೆ ಇದೆಲ್ಲಾ ವಿಚಾರ ಮುಂದಿಟ್ಟು ಬಿಜೆಪಿ ಪಾದಯಾತ್ರೆ ಮಾಡಲಿದೆ. ಕೆಲಸಕ್ಕೆ ಬಾರದವರು ಎಂದು ಬಿಂಬಿಸಲು ಹೊರಟಿದ್ದಾರೆ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಯಾರೇ ಇದ್ದರೂ ಹೋರಾಟ, ಯಾರಿಗೂ ಹೆದರದೇ ಜನರ ಪರವಾಗಿ ಹೋರಾಟ ಮಾಡುತ್ತೇವೆ. ಬಿಜೆಪಿ ಅಧ್ಯಕ್ಷನಾಗಿ ಅನೇಕ ಕ್ರಮ ಕೈಗೊಂಡಿರುವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

Key words: Bidadi Padayatra, against, township project,  BY Vijayendra