ಯುವತಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್

ದಕ್ಷಿಣ ಕನ್ನಡ, ಜುಲೈ,17,2026(www.justkannada.in): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಚೇತನ್ ಗೌಡ ಬಂಧಿತ ಆರೋಪಿ. ಮಂಗಳೂರು ಬಳಿಯ ವಾಮಂಜೂರು ಪಚ್ಚನಾಡಿಯಲ್ಲಿ ಆರೋಪಿ ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ.  ನಿನ್ನೆ ಬಿಸಿ ರೋಡ್ ನಲ್ಲಿ ಯುವತಿ ಲಾವಣ್ಯಳನ್ನು ಚೇತನ್ ಕೊಲೆ ಮಾಡಿದ್ದ.

ಬಸ್‌ನಲ್ಲಿ ಕುಳಿತಿದ್ದ ಲಾವಣ್ಯಳನ್ನು ಹಿಂಬಾಲಿಸಿಕೊಂಡು ಬಂದ ಯುವಕ ಚೇತನ್ ಬಲವಂತವಾಗಿ ಕೆಳಗಿಳಿಸಿ ಕತ್ತಿಯಿಂದ ದಾಳಿ ನಡೆಸಿದ್ದ. . ಗಂಭೀರವಾಗಿ ಗಾಯಗೊಂಡಿದ್ದ ಲಾವಣ್ಯ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದರು.

Key words: Young woman, murdered, accused, Arrest