Wednesday, September 2, 2026

BDA Apartments

Home Front Page ಬಿಜೆಪಿ ಹೈಕಮಾಂಡ್ ಗೆ ವಿಜಯೇಂದ್ರ ಕಂಡರೆ ಭಯ ಇದ್ದಂತೆ ಇದೆ- ಶಾಸಕ ಯತ್ನಾಳ್

ಬಿಜೆಪಿ ಹೈಕಮಾಂಡ್ ಗೆ ವಿಜಯೇಂದ್ರ ಕಂಡರೆ ಭಯ ಇದ್ದಂತೆ ಇದೆ- ಶಾಸಕ ಯತ್ನಾಳ್

ಮೈಸೂರು,ಜುಲೈ,17,2026 (www.justkannada.in): ಬಿಜೆಪಿ ಹೈಕಮಾಂಡ್ ಗೆ ವಿಜಯೇಂದ್ರ ಕಂಡರೆ ಭಯ ಇದ್ದಂತೆ ಇದೆ. ಕರ್ನಾಟಕ ಬಿಜೆಪಿ ಅಧ್ಯಕ್ಷರ ಬಗ್ಗೆ ಇನ್ನೂ ಭಯ ಇದ್ದಂತೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ರಾಜ್ಯಾಧ್ಯಕ್ಷರ ಕುಟಂಬ ಬಹಳ ಪ್ರಭಾವಿಗಳೆಂದು ಅಂದುಕೊಂಡಿದ್ದಾರೆ.  ಬಿಜೆಪಿ ಹೈಕಮಾಂಡ್ ನಾಯಕರು ಅಂದುಕೊಂಡಿದ್ದಾರೆ.  ಆದರೆ ಹೈಕಮಾಂಡ್ ಗೆ ಆದಷ್ಟು ಬೇಗ ಸತ್ಯದ ಅರಿವಾಗುತ್ತದೆ. ಕೆಲ ರಾಜ್ಯಗಳಲ್ಲಿ ನಾಯಕರನ್ನು ಹೈಕಮಾಂಡ್ ಮನೆಗೆ ಕಳಿಸಿದೆ.  ನವೆಂಬರ್ ಅಥವಾ ಡಿಸೆಂಬರ್ ಒಳಗೆ ಇಲ್ಲೂ ಬದಲಾಗಬಹುದು ಎಂದರು.

ಬಿಜೆಪಿ, ಕಾಂಗ್ರೆಸ್ ನ ಕೆಲವರು ಸೇರಿ ಅಡ್ಡಮತದಾನ ಮಾಡಿಸಿದರು. ಈ ಸತ್ಯ ಬಿಜೆಪಿ ಹೈಕಮಾಂಡ್ ಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಇಂತಹ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ ಗೊತ್ತಿಲ್ಲ.  ಇಲ್ಲಿ ಪಕ್ಷ ಪಕ್ಷಗಳು ಒಂದಾಗಿಲ್ಲ ನಾಯಕರು ನಾಯಕರು ಒಂದಾಗಿದ್ದಾರೆ.  ಇದು ಪಕ್ಷವನ್ನು ಹಾಳು ಮಾಡುತ್ತಿದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

Key words: BJP, high command, afraid , BY Vijayendra, MLA, Yatnal