Sunday, September 6, 2026

BDA Apartments

Home Front Page 15 ಜನ ಅಥವಾ 35 ಜನರ ಆಯ್ಕೆಯಿಂದ ಡಿಕೆಶಿ ಸಿಎಂ ಆದವರಲ್ಲ-ಹೆಚ್ ಡಿಕೆಗೆ ಚಲುವರಾಯಸ್ವಾಮಿ ಟಾಂಗ್

15 ಜನ ಅಥವಾ 35 ಜನರ ಆಯ್ಕೆಯಿಂದ ಡಿಕೆಶಿ ಸಿಎಂ ಆದವರಲ್ಲ-ಹೆಚ್ ಡಿಕೆಗೆ ಚಲುವರಾಯಸ್ವಾಮಿ ಟಾಂಗ್

ಬೆಂಗಳೂರು,ಜುಲೈ,16,2026 (www.justkannada.in):  ಡಿಕೆ ಶಿವಕುಮಾರ್ ರನ್ನು ಸಿಎಂ ಆಗಿ ಒಪ್ಪಿಲ್ಲ ಎಂಬ ಹೇಳಿಕೆ ವಿಚಾರ ಕುರಿತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ಚಾಮಿಗೆ ಮಾಜಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಚಲುವರಾಯಸ್ವಾಮಿ,  ಆಕಸ್ಮಿಕವಾಗಿ ಸಿಎಂ ಆಗಿದ್ದರೋ ಅಪರೇಷನ್ ಕಮಲವೋ?  ಯಾವುದೋ ರೀತಿಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದವರು.  ಏನೇ ಮಾಡಿದರೂ ಮಾಜಿ ಪ್ರಧಾನಿ ಮಗ ಅನ್ನೋದು ಇದೆ. ಹೆಚ್ ಡಿಕೆ ನಗೆಪಾಟಲು ವಿಚಾರ ಹೇಳಿದ್ದಾರೆ.  ಡಿಕೆಶಿರನ್ನು ನಾನು ಸಿಎಂ ಆಗಿ ಒಪ್ಪಲ್ಲ ಎಂದಿದ್ದಾರೆ. ಅಂದರೆ ಸಂವಿಧಾನವನ್ನು ಕುಮಾರಸ್ವಾಮಿ  ಒಪ್ಪಿಲ್ಲ ಎಂದರ್ಥ.  15 ಜನ  ಅಥವಾ 35 ಜನರ ಆಯ್ಕೆಯಿಂದ ಡಿಕೆಶಿ ಸಿಎಂ ಆದವರಲ್ಲ. 136 ಶಾಸಕರನ್ನ ಗೆಲ್ಲಿಸಿ ಸಿಎಂ ಆದವರು. ಸಿದ್ದರಾಮಯ್ಯ ಬಹಳ ಸಂತೋಷದಿಂದ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೊಟ್ಟಿದ್ದಾರೆ ಹೆಚ್ ಡಿಕೆ ಸರ್ಟಿಫೀಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಹೆಚ್ ಡಿಕೆ ಹೇಗೆ ಸಿಎಂ ಆಗಿದ್ರು ಎಂದು ಒಮ್ಮೆ ನೆನಪಿಸಿಕೊಳ್ಳಲಿ.  ಮೊದಲ ಬಾರಿ ಅಪರೇಷನ್ ಕಮಲ ಮಾಡಿದ್ದು ಕುಮಾರಸ್ವಾಮಿ ಕುಮಾರಸ್ವಾಮಿ ಸಂವಿಧಾನಾತ್ಮಕವಾಗಿ ಆಯ್ಕೆಯಾದ ಮುಖ್ಯಮಂತ್ರಿನಾ?  ಹೆಚ್ ಡಿಕೆ ನಾಯಕತ್ವದಲ್ಲಿ 37 ಸೀಟಿಗಿಂತ ಹೆಚ್ಚು ಗೆದ್ದಲ್ಲ. ಸಂವಿಧಾನ ಪ್ರಕಾರ ಆಯ್ಕೆಯಾದ ಮುಖ್ಯಮಂತ್ರಿ ಡಿಕೆ ಶಿವಕುಮಾರ್.  ಡಿಕೆಶಿ ಸಿಎಂ ಆಗಿ ಒಂದು ತಿಂಗಳು ಆಗಿದೆ ಅಷ್ಟೇ. ನಿಮ್ಮಿಂದ ಒಂದಲ್ಲ ಒಂದು ವಿಚಾರದಲ್ಲಿ ಹೊಟ್ಟೆ ಕಿಚ್ಚು ಕೇಂದ್ರ ಸಚಿವರಾಗಿ ಏನೆಲ್ಲಾ ಮಾಡಿದ್ದೀರಾ ಗೊತ್ತಿದೆ. ಎಸ್. ಎಂ ಕೃಷ್ಣರನ್ನ ಮತ್ತೆ ಸಿಎಂ ಮಾಡಲು ಒಪ್ಪದೇ ಇರುವವರು ನೀವು.  ಮತ್ತೊಬ್ಬ ಒಕ್ಕಲಿಗ ಡಿಕೆಶಿ ರನ್ನು ಒಪ್ಪಲು ಸಾಧ್ಯಾನಾ ನೀವು? ಎಂದು ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

Key words:   DK Shivakumar, CM, Chaluvarayaswamy, HDK