ಬಿಡದಿ ಟೌನ್ ಶಿಪ್ ಕೈಬಿಡಿ, ಇಲ್ಲದಿದ್ರೆ ಸತ್ಯಾಗ್ರಹ- ಸಿಎಂಗೆ ಮಾಜಿ ಪ್ರಧಾನಿ HDD ಎಚ್ಚರಿಕೆ

ಬೆಂಗಳೂರು,ಜುಲೈ,14,2026 (www.justkannada.in): ವಿವಾದಿತ ಬಿಡದಿ ಟೌನ್​​ಶಿಪ್​​  ಯೋಜನೆಯನ್ನ ತಕ್ಷಣವೇ ಕೈ ಬಿಡಿ ಇಲ್ಲದಿದ್ದರೇ ಸತ್ಯಾಗ್ರಹಕ್ಕೆ  ನಡೆಸಬೇಕಾಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್​​ ಅವರಿಗೆ ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರು ಪತ್ರ ಬರೆದಿದ್ದಾರೆ.

ಬಿಡದಿ ಟೌನ್ ಶಿಪ್ ಯೋಜನೆ ತಕ್ಷಣ ಕೈಬಿಡುವಂತೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಹೆಚ್ ಡಿ ದೇವೇಗೌಡರು,  ಒಂದೊಮ್ಮೆ ರಾಜ್ಯ ಸರ್ಕಾರ ತಮ್ಮ ಮನವಿ ತಿರಸ್ಕರಿಸಿದ್ದೇ ಆದಲ್ಲಿ ಈಗಾಗಲೇ ನಿರಂತರ ಹೋರಾಟ ಮತ್ತು ಧರಣಿಯಲ್ಲಿ ಇರುವ ರೈತರನ್ನು ಬೆಂಬಲಿಸಿ, ನಮ್ಮ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ 7 ದಶಕಗಳ ಸಾರ್ವಜನಿಕ ಜೀವನದಲ್ಲಿ ರಾಜ್ಯ ಮತ್ತು ದೇಶದ ರೈತರ ಹಿತಕ್ಕೆ ಶ್ರಮಿಸುತ್ತಿದ್ದೇನೆ ಹಾಗೂ ಅಧಿಕಾರ ತ್ಯಾಗ ಮಾಡಿದ್ದೇನೆ. ರಾಜ್ಯ ಸರ್ಕಾರ ನನ್ನ ಮನವಿಯನ್ನು ತಿರಸ್ಕರಿಸಿದರೆ ಹಾಗೂ ತಮ್ಮ ಈ ಕೂಗಿಗೆ ಕಿವಿಕೊಡದಿದ್ದರೆ ವಿಧಾನಸೌಧದ ಆವರಣದಲ್ಲಿನ ಗಾಂಧೀಜಿ ಪ್ರತಿಮೆ ಮುಂದೆ ಕುಳಿತು ಸತ್ಯಾಗ್ರಹ  ಮಾಡಲಾಗುವುದು ಎಂದು ಹೆಚ್ ಡಿ ದೇವೇಗೌಡರು ಪತ್ರದಲ್ಲಿ ತಿಳಿಸಿದ್ದಾರೆ.

Key words:  Bidadi, township, Former PM, HD Devegowda, Letter, CM