ಬೆಂಗಳೂರು,ಜುಲೈ,9,2026 (www.justkannada.in): ನಮ್ಮ ಸರ್ಕಾರ ಬೀದಿಬದಿ ವ್ಯಾಪಾರಿಗಳ ವಿರುದ್ದವಿಲ್ಲ. ಫುಟ್ ಪಾತ್ ತೆರವು ಕಾರ್ಯಾಚರಣೆ ಎಂದಿನಂತೆ ನಡೆಯುತ್ತದೆ ಎಂದು ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಇಂದು ಬೆಂಗಳೂರು ಜಿಬಿಎ ಕಚೇರಿಯಲ್ಲಿ ಬೀದಿಬದಿ ವ್ಯಾಪಾರಿ ಸಂಘಟನೆ ಜೊತೆ ಸಚಿವ ಕೃಷ್ಣಭೈರೇಗೌಡ ಸಭೆ ನಡೆಸಿ ಚರ್ಚಿಸಿದರು.
ಸಭೆ ಬಳಿಕ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಬಡವರು, ಬದಕುಬೇಕು, ಶ್ರೀಮಂತರು ಬದುಕಬೇಕು ದುಡಿಯು ವರ್ಗ ಬದುಕಬೇಕು ಎಲ್ಲಾರು ಒಟ್ಟಗಿದ್ದರೇ ಬೆಂಗಳೂರು. ನಮ್ಮ ಸರ್ಕಾರ ಬೀದಿಬದಿ ವ್ಯಾಪಾರಿಗಳ ವಿರುದ್ದ ಅಲ್ಲ . ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕು. ಹೀಗಾಗಿ ಎಂದಿನಂತೆ ಕಾರ್ಯಚರಣೆ ನಡೆಯಲಿದೆ. ವ್ಯಾಪಾರಿಗಳಿಗೆ ಏನ್ ಸಹಕಾರ ಕೊಡಬೇಕೋ ಅದನ್ನ ಮಾಡುತ್ತೇವೆ ಎಂದು ತಿಳಿಸಿದರು.
Key words: government, not, against, street vendors, Minister, Krishna Bhairegowda






