Friday, October 9, 2026

BDA Apartments

Home Front Page ತಕ್ಷಣವೇ ಸಂತ್ರಸ್ತ ರೈತರ ಸಾಲಮನ್ನಾ ಮಾಡಿ –ಸಿಎಂ ಡಿಕೆಶಿಗೆ ಆರ್. ಅಶೋಕ್ ಪತ್ರ

ತಕ್ಷಣವೇ ಸಂತ್ರಸ್ತ ರೈತರ ಸಾಲಮನ್ನಾ ಮಾಡಿ –ಸಿಎಂ ಡಿಕೆಶಿಗೆ ಆರ್. ಅಶೋಕ್ ಪತ್ರ

ಬೆಂಗಳೂರು,ಜುಲೈ,8,2026 (www.justkannada.in): ರಾಜ್ಯದ ಅತಿವೃಷ್ಠಿ ಅನಾವೃಷ್ಠಿ ಹಿನ್ನೆಲೆ ತಕ್ಷಣವೇ ಸಂಕಷ್ಟಕ್ಕೊಳಗಾದ ರೈತರ ಸಾಲಮನ್ನಾ ಮಾಡಿ ಎಂದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಆರ್.ಅಶೋಕ್, ಬರ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ರೈತರ ಸಾಲಮನ್ನಾ ಮಾಡಿ. ತಕ್ಷಣವೇ ಕನಿಷ್ಠ 50 ಸಾವಿರ ರೂ.ವರೆಗೆ ಸಾಲಮನ್ನಾ ಘೋಷಿಸಿ.   ಅಲ್ಲದೆ ಸಂತ್ರಸ್ತ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿ. ಪ್ರತಿ ತಾಲ್ಲೂಕಿನಲ್ಲೂ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ. ಸಮೀಕ್ಷೆ ಪರಿಹಾರ ವಿತರಣೆ ಕಾರ್ಯಗಳ ಉಸ್ತುವಾರಿ ಶಾಸಕರಿಗೆ ವಹಿಸಿ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ತುರ್ತು ಅನುದಾನ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಬೆಳೆ ಹಾನಿ ಸಮೀಕ್ಷೆಯನ್ನು ಯುದ್ದೋಪಾದಿಯಲ್ಲಿ ಪೂರ್ಣಗೊಳಿಸಿ. ರಾಜ್ಯಕ್ಕೆ ಸಿಗಬೇಕಾದ ಕೇಂದ್ರದ ನೆರವು ಪಡೆದುಕೊಳ್ಳಲು ವರದಿ ಸಲ್ಲಿಸಿ.  ಸಚಿವರು ತಕ್ಷಣವೇ ಪ್ರವಾಹ ಪೀಡಿತ ಪ್ರದೇಶಗಳಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡಲಿ.ತಕ್ಷಣವೇ ಸಂತ್ರಸ್ತ ರೈತರ ಸಾಲಮನ್ನಾ ಮಾಡಿ dks dks 7

ರಾಜ್ಯ ಸರ್ಕಾರ ರಾಜಕೀಯ ಪ್ರೇರಿತ ಆರೋಪ ಬದಿಗಿಟ್ಟು ಆಡಳಿತಾತ್ಮಕ ಕಾರ್ಯಗಳನ್ನ ಕೈಗೊಳ್ಳಲಿ. ಸಿಎಂ ರೈತರ ಸಾಲಮನ್ನಾ ಭರವಸೆ ಈಡೇರಿಸಿ ಸಂತ್ರಸ್ತರ ರೈತರ ನೆರವಿಗೆ ಧಾವಿಸಿ ಎಂದು ಪತ್ರದಲ್ಲಿ  ಒತ್ತಾಯಿಸಿದ್ದಾರೆ.ಸಿಎಂ ಡಿಕೆಶಿಗೆ ಆರ್. ಅಶೋಕ್ ಪತ್ರ jk02_new jk02 new

Key words:  Immediately, waive , loans , affected, farmers,  R. Ashok, letter, CM DK Shivakumar