Saturday, October 10, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಬೆಂಗಳೂರು ಸೇರಿದಂತೆ 7 ಕಡೆ ಲೋಕಾಯುಕ್ತ ಪೊಲೀಸರ ದಾಳಿ, ಪರಿಶೀಲನೆ

ಬೆಂಗಳೂರು ಸೇರಿದಂತೆ 7 ಕಡೆ ಲೋಕಾಯುಕ್ತ ಪೊಲೀಸರ ದಾಳಿ, ಪರಿಶೀಲನೆ

ಬೆಂಗಳೂರು,ಜುಲೈ,7,2026 (www.justkannada.in) :  ಬೆಂಗಳೂರಿನ ಕಾವೇರಿ ಭವನ ಸೇರಿದಂತೆ 7 ಕಡೆ ಲೋಕಾಯುಕ್ತ ಪೊಲೀಸರು ಇಂದು ಏಕಾಏಕಿ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನ ಕಾವೇರಿ ಭವನ ಯಲಹಂಕ ತಹಶೀಲಾರ್ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸೇರಿದಂತೆ ಒಟ್ಟು ಏಳು ಕಡೆ ಲೋಕಾಯುಕ್ತ  ಪೊಲೀಸರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಬೆಂಗಳೂರು ಸೇರಿದಂತೆ 7 ಕಡೆ ಲೋಕಾಯುಕ್ತ ಪೊಲೀಸರ ದಾಳಿ, ಪರಿಶೀಲನೆ lokayukta

ಆಹಾರ ಇಲಾಖೆಯ ಎಂಡಿ ಎಂ.ಕೆ ಜಗದೀಶ್ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ.  ಈ ಹಿಂದೆ ಬೆಂಗಳೂರು ನಗರದಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಜಗದೀಶ್ ಯಲಹಂಕದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಜಮೀನು ನೀಡಿದ್ದ ಆರೋಪ ಕೇಳಿ ಬಂದಿತ್ತು. 2023 ರಲ್ಲಿ 9 ಹಾಗೂ 2 ಜಮೀನನ್ನು ಅನಧಿಕೃತವಾಗಿ ನೀಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಜಗದೀಶ್ ಅವರ ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ.ಬೆಂಗಳೂರು ಸೇರಿದಂತೆ 7 ಕಡೆ ಲೋಕಾಯುಕ್ತ ಪೊಲೀಸರ ದಾಳಿ jk02_new jk02 new

Key words: Lokayukta, raid, 7 places, including, Bengaluru