Sunday, September 27, 2026

BDA Apartments

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಕೆ. ಭಾಗ್ಯರಾಜ್ ನಿಧನ BDA JK_Adv BDA Adv
Home Cinema ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಕೆ. ಭಾಗ್ಯರಾಜ್ ನಿಧನ

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಕೆ. ಭಾಗ್ಯರಾಜ್ ನಿಧನ

ಚೆನ್ನೈ, ಜೂನ್,27,2026 (www.justkannada.in):  ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ, ಕಥೆಗಾರ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ತಮಿಳು ಚಿತ್ರರಂಗದಲ್ಲಿ “ಸ್ಕ್ರೀನ್‌ ಪ್ಲೇ ಕಿಂಗ್” ಎಂದೇ ಖ್ಯಾತರಾಗಿದ್ದ ಭಾಗ್ಯರಾಜ್, ತಮ್ಮ ವಿಶಿಷ್ಟ ಕಥೆ ಹೇಳುವ ಶೈಲಿ, ಹಾಸ್ಯಮಯ ನಿರೂಪಣೆ ಮತ್ತು ಮಧ್ಯಮ ವರ್ಗದ ಕುಟುಂಬ ಕಥೆಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರು ನಟ, ನಿರ್ದೇಶಕ, ಕಥೆಗಾರ, ನಿರ್ಮಾಪಕ ಹಾಗೂ ಸಂಭಾಷಣೆಕಾರರಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರು.ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ BDA JK_Adv BDA Adv

1953ರ ಜನವರಿ 7ರಂದು ತಮಿಳುನಾಡಿನ ಎರೋಡ್ ಜಿಲ್ಲೆಯ ವೆಳ್ಳಂಕೊಯಿಲ್‌ ನಲ್ಲಿ ಜನಿಸಿದ ಭಾಗ್ಯರಾಜ್, ನಿರ್ದೇಶಕ ಭಾರತಿರಾಜ ಅವರ ಸಹಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದರು. ನಟನಾಗಿ 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಮುಂಧಾನೈ ಮುಡಿಚು, ಅಂದಾ 7 ನಾಟಕಲ್, ಚಿನ್ನ ವೀಡು, ಸುಂದರಕಾಂಡಂ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದರು.ನಟ ಕೆ. ಭಾಗ್ಯರಾಜ್ ನಿಧನ BAGYARAJ

ಭಾಗ್ಯರಾಜ್ ಅವರ ಅಗಲಿಕೆಗೆ ತಮಿಳು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅವರ ಪತ್ನಿ ನಟಿ ಪೂರ್ಣಿಮಾ ಭಾಗ್ಯರಾಜ್, ಪುತ್ರ ನಟ ಶಾಂತನೂ ಭಾಗ್ಯರಾಜ್ ಹಾಗೂ ಪುತ್ರಿ ಶರಣ್ಯ ಭಾಗ್ಯರಾಜ್ ಅವರನ್ನು ಅಗಲಿದ್ದಾರೆ.bhagyaraj passes away jk02_new jk02 new

ಕೆ. ಭಾಗ್ಯರಾಜ್ ಅವರ ನಿಧನದಿಂದ ದಕ್ಷಿಣ ಭಾರತೀಯ ಚಿತ್ರರಂಗ ಮತ್ತೊಬ್ಬ ದಿಗ್ಗಜ ಕಲಾವಿದನನ್ನು ಕಳೆದುಕೊಂಡಂತಾಗಿದೆ.

ENGLISH SUMMARY…

Veteran Tamil filmmaker K. Bhagyaraj passes away at 73

Chennai, June 27: Veteran Tamil actor, director, screenwriter and producer K. Bhagyaraj passed away at the age of 73 following a cardiac arrest in Chennai on Saturday. Widely known as the “Screenplay King” of Tamil cinema, Bhagyaraj was celebrated for his unique storytelling, family dramas and sharp humor.

Bhagyaraj began his career as an assistant to filmmaker Bharathiraja before emerging as one of Tamil cinema’s most successful directors and writers. Some of his most memorable films include Mundhanai Mudichu, Andha 7 Naatkal, Chinna Veedu and Sundara Kandam.

His death has triggered an outpouring of grief from the film fraternity, political leaders and fans across India. He is survived by his wife Poornima Bhagyaraj, son Shanthanu Bhagyaraj and daughter Saranya Bhagyaraj.

#KBhagyaraj #TamilCinema #RIPBhagyaraj #ScreenplayKing #Kollywood

Key words: Veteran, Tamil film, director,  actor, K. Bhagyaraj, passes away