Sunday, September 27, 2026

BDA Apartments

ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ BDA JK_Adv BDA Adv
Home Cinema ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ

ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ

ಶಿವಮೊಗ್ಗ,ಜೂನ್,27,2026 (www.justkannada.in):  ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ, ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾ. ಮಾ ಹರೀಶ್​​  ಅವರ ಪುತ್ರ ಉಲ್ಲಾಸ್(28)  ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಉಲ್ಲಾಸ್ ಅವರು ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್ ಎಂದು ತೆರಳಿದ್ದರು. ಬೆಳಿಗ್ಗೆ ಬೆಟ್ಟ ಹತ್ತುವಾಗ ಉಲ್ಲಾಸ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.  ಉಲ್ಲಾಸ್ ಅವರಿಗೆ ಡಿಸೆಂಬರ್ ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು. ಇತ್ತೀಚೆಗಷ್ಟೆ ನಿಶ್ಚಿತಾರ್ಥವೂ ನಡೆದಿತ್ತು.ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ heart attack

ಆದರೆ ಇದೀಗ ಹಠಾತ್ತನೆ ಉಲ್ಲಾಸ್ ನಿಧನ ಹೊಂದಿದ್ದಾರೆ. ಕೊಡಚಾದ್ರಿ ಬೆಟ್ಟಕ್ಕೆ ಗೆಳೆಯರೊಟ್ಟಿಗೆ ಚಾರಣಕ್ಕಾಗಿ ಹೋಗಿದ್ದಾಗ ಅವರಿಗೆ ಹೃದಯಾಘಾತವಾಗಿದೆ. ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಹೆಸರಿನ ನಾಟಕ ಶಾಲೆ ನಡೆಸುತಿದ್ದರು.justkannada jk02_new jk02 new

Key words: Producer, Ba.Ma Harish, son, dies, heart attack