Thursday, September 24, 2026

BDA Apartments

Home Front Page NCERT 6ನೇ ಕ್ಲಾಸ್‌ ಕನ್ನಡ ಪುಸ್ತಕಕ್ಕೆ ಕೃಷ್ಣ ಹೆಸರು: ಕೇಂದ್ರದ ವಿರುದ್ದ ಮಧು ಬಂಗಾರಪ್ಪ ಆಕ್ರೋಶ

NCERT 6ನೇ ಕ್ಲಾಸ್‌ ಕನ್ನಡ ಪುಸ್ತಕಕ್ಕೆ ಕೃಷ್ಣ ಹೆಸರು: ಕೇಂದ್ರದ ವಿರುದ್ದ ಮಧು ಬಂಗಾರಪ್ಪ ಆಕ್ರೋಶ

ಬೆಂಗಳೂರು,ಜೂನ್,25,2026 (www.justkannada.in): ಎನ್ ಸಿಇಆರ್ ಟಿಯ ಆರನೇ ತರಗತಿ ಕನ್ನಡ ಪುಸ್ತಕಕ್ಕೆ ಕೃಷ್ಣ ಎಂದು ಹೆಸರಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಮಧು ಬಂಗಾರಪ್ಪ, ಎನ್ ಸಿಇಆರ್ ಟಿಯು ಕರ್ನಾಟಕ ಸಂಸ್ಕೃತಿಯನ್ನೇ ಕೈಬಿಟ್ಟಿದೆ.  ಮಹಾತ್ಮ ಗಾಂಧಿ ಕೊಂದ ಗೂಡ್ಸೆ ಬಗ್ಗೆ ಮಕ್ಕಳು ಕಲಿಯಬೇಕಾ. ಆರ್ ಎಸ್ ಎಸ್, ವಿಶ್ವಹಿಂದೂ ಪರಿಷತ್ ಬಗ್ಗೆ ಮಕ್ಕಳು ಅಧ್ಯಯನ ಮಾಡಬೇಕಾ? ಹೀಗೆ ಆದರೆ  ನಾಳೆ ಮಕ್ಕಳಿಗೆ ಮಹಾತ್ಮ ಗಾಂಧಿ,  ಕುವೆಂಪು ಯಾರೆಂದು ಗೊತ್ತಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಕೃಷ್ಣ ಹೆಸರು ಕನ್ನಡ ಭಾಷೆ ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ. ಇತಿಹಾಸ ಕಡೆಗಣಿಸಿ ಪಠ್ಯ ಪುಸ್ತಕ ಪ್ರಕಟಿಸಲಾಗಿದೆ. ಕನ್ನಡ ಆಸ್ಮಿತೆಗೆ ಧಕ್ಕೆ ತರುವ ರೀತಿಯಲ್ಲಿ ಪಠ್ಯ ಸಿದ್ದಪಡಿಸಲಾಗಿದೆ. ಈಗ ಸಿದ್ದಪಡಿಸಿರುವುದನ್ನ ಕೈಬಿಟ್ಟು  ಹೊಸ ಪಠ್ಯಪುಸ್ತಕ ಸಿದ್ದಪಡಿಸಬೇಕು ಎಂದು ಮಧು ಬಂಗಾರಪ್ಪ ಆಗ್ರಹಿಸಿದ್ದಾರೆ.NCERT 6ನೇ ಕ್ಲಾಸ್‌ ಕನ್ನಡ ಪುಸ್ತಕಕ್ಕೆ ಕೃಷ್ಣ ಹೆಸರು jk02_new jk02 new

Key words: NCERT, Kannada Book, Named, Krishna, Madhu Bangarappa