Thursday, September 17, 2026

BDA Apartments

ವೈರಲ್ ಆಯ್ತು ಸಿಎಂ ಯಡಿಯೂರಪ್ಪ ಅವರ ‘ ಟಿಪ್ಪು ‘ ಬಣ್ಣನೆ BDA JK_Adv BDA Adv
Home Front Page ವೈರಲ್ ಆಯ್ತು ಸಿಎಂ ಯಡಿಯೂರಪ್ಪ ಅವರ ‘ ಟಿಪ್ಪು ‘ ಬಣ್ಣನೆ.

ವೈರಲ್ ಆಯ್ತು ಸಿಎಂ ಯಡಿಯೂರಪ್ಪ ಅವರ ‘ ಟಿಪ್ಪು ‘ ಬಣ್ಣನೆ.

 

ಮೈಸೂರು, ಅ.31, 2019 : (www.justkannada.in news) ಶಾಲಾ ಪಠ್ಯ ದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರ ಶೌರ್ಯ, ಸಾಹಸಗಳ ಇತಿಹಾಸವನ್ನು ತಿಳಿಸುವ ಕೃತಿಗಳನ್ನು ಕೈ ಬಿಡಲು ಸರ್ಕಾರ ಮುಂದಾಗಿದೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ, ಯಡಿಯೂರಪ್ಪ ಅವರು ಟಿಪ್ಪು ಸುಲ್ತಾನ್ ರನ್ನು ಹಾಡಿ ಹೊಗಳಿದ್ದ ಬಣ್ಣಿಸಿದ್ದ ಘಟನೆ ವೈರಲ್ ಆಗಿದೆ.

ಈ ಹಿಂದೆ 2012 ರಲ್ಲಿ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ದರ್ಗಾಗೆ ಭೇಟಿ ನೀಡಿದ್ದ ಯಡಿಯೂರಪ್ಪ, ಈ ವೇಳೆ
ಟಿಪ್ಪು ಸುಲ್ತಾನ್ ಬಗ್ಗೆ ಸಂದರ್ಶಕರ ಪುಸ್ತಕ ದಲ್ಲಿ ಸ್ವಅಕ್ಷರದಿಂದ ಮೈಸೂರು ಹುಲಿ ಟಿಪ್ಪುವನ್ನು ಹಾಡಿ ಹೊಗಳಿದ್ದರು.
ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ದ ವೀರಾವೇಷದಿಂದ ಹೋರಾಟ ಮಾಡಿದ್ದಾನೆ. ತಾಯಿನಾಡನ್ನು ಉಳಿಸಲು ಬಲಿದಾನ ಮಾಡಿದ್ದಾನೆ ಎಂದು ಯಡಿಯೂರಪ್ಪ ಟಿಪ್ಪುವನ್ನು ಕೊಂಡಾಡಿದ್ದರು.
ಸ್ವತಃ ಯಡಿಯೂರಪ್ಪ ನವರೇ ಇಂಗ್ಲಿಷನಲ್ಲಿ ಬರೆದಿರುವ ಈ ವಾಕ್ಯಗಳು, ಇದೀಗ ಟಿಪ್ಪು ಚರಿತ್ರೆಯನ್ನು ಬ್ಯಾನ್ ಮಾಡ್ತೀವಿ ಎಂದು ಸಿಎಂ ಬಿಎಸ್ವೈ ಹೇಳಿಕೆ ನೀಡಿದ ಕಾರಣ ಮತ್ತೆ ಮುನ್ನೆಲೆಗೆ ಬಂದಿದೆ.

key words : bsy-tippu.sulthan-mysore-tiger