Thursday, September 17, 2026

BDA Apartments

Home Front Page ಹೊಸ ಕೇಂದ್ರಡಳಿತ ಪ್ರದೇಶ ಲಡಾಖ್ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾಕೃಷ್ಣ ಮಾಥುರ್ ಪ್ರಮಾಣ ವಚನ

ಹೊಸ ಕೇಂದ್ರಡಳಿತ ಪ್ರದೇಶ ಲಡಾಖ್ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾಕೃಷ್ಣ ಮಾಥುರ್ ಪ್ರಮಾಣ ವಚನ

ಲಡಾಖ್, ಅಕ್ಟೋಬರ್ 31, 2019 (www.justkannada.in): ಹೊಸ ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾ ಕೃಷ್ಣ ಮಾಥುರ್ ಪ್ರಮಾಣವಚನ ಸ್ವೀಕರಿಸಿದರು.

1977 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಮಾಥುರ್, 2018 ರಲ್ಲಿ ಭಾರತದ ಮುಖ್ಯ ಮಾಹಿತಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಲಡಾಖ್ ನ ಲೆಫ್ಟಿನೆಂಟ್ ಗವರ್ನರ್ ಆಗುವುದಕ್ಕೂ ಮುನ್ನ 65 ವರ್ಷ ವಯಸ್ಸಿನ ಮಾಥುರ್ ಭದ್ರತಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಐಐಟಿ ಕಾನ್ಪುರದಲ್ಲಿ ಓದಿದ್ದ ಮಾಥುರ್, ಸ್ಲೊವೆನಿಯಅದ ಇಂಟರ್ನ್ಯಾಶ್ನಲ್ ಸೆಂಟರ್ ಫಾರ್ ಪ್ರಮೋಶನ್ ಆಫ್ ಎಂಟರ್ ಪ್ರೈಸಸ್ (ಐಸಿಪಿಇ) ನಲ್ಲಿ ಎಂಬಿಎ ಪದವಿ ಪಡೆದಿದ್ದರು.