Thursday, September 17, 2026

BDA Apartments

Home Front Page ಇನ್ಮುಂದೆ ಎಲ್ಲ ತುರ್ತು ಸೇವೆಗಳಿಗೆ ಒಂದೇ ಸಂಖ್ಯೆ 112: ಇಂದು ಸಂಜೆ ಸೇವೆಗೆ ಅಧಿಕೃತ ಚಾಲನೆ

ಇನ್ಮುಂದೆ ಎಲ್ಲ ತುರ್ತು ಸೇವೆಗಳಿಗೆ ಒಂದೇ ಸಂಖ್ಯೆ 112: ಇಂದು ಸಂಜೆ ಸೇವೆಗೆ ಅಧಿಕೃತ ಚಾಲನೆ

ಬೆಂಗಳೂರು, ಅಕ್ಟೋಬರ್ 31, 2019 (www.justkannada.in): ಇನ್ನು ಮುಂದೆ ಎಲ್ಲ ತುರ್ತು ಸೇವೆಗೆ ಒಂದೇ ನಂಬರ್ ಗೆ ಕರೆ ಮಾಡಬಹುದು.

ಸುರಕ್ಷತೆ ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ (ಇಆರ್ ಎಸ್‍ಎಸ್)ಗೆ ಏಕೈಕ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಇಂದು ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 112 ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಈ ಮೊದಲು ಪೊಲೀಸ್ ನೆರವು ಬೇಕಾದಲ್ಲಿ 100ಕ್ಕೆ, ಅಗ್ನಿಶಾಮಕ ನೆರವು ಬೇಕಾದಲ್ಲಿ 101ಕ್ಕೆ, ಆರೋಗ್ಯಕ್ಕೆ 108ಗೆ ಹೀಗೆ ಬೇರೆ ಬೇರೆ ಸೇವೆಗಳಿಗೆ ವಿವಿಧ ತುರ್ತು ಸಹಾಯವಾಣಿ ಸಂಖ್ಯೆ ಇತ್ತು. ಆದ್ರೆ ಇನ್ಮುಂದೆ ಎಲ್ಲಾ ವ್ಯವಸ್ಥೆಗೂ 112 ಏಕೈಕ ತುರ್ತು ಸಹಾಯವಾಣಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ.