ಲಂಚಕ್ಕೆ ಬೇಡಿಕೆ: PSI ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ

ಕಲಬುರಗಿ,ಜೂನ್,19,2026 (www.justkannada.in):  ಅಕ್ಕಿ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡುವುದಾಗಿ ಹೇಳಿ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಬಂಧಿಸಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ದೂರುದಾರರಾದ ಆನಂದ್ ಕುಮಾರ್ (ಯಡ್ರಾಮಿ ತಾಲೂಕು, ಕಲಬುರಗಿ ಜಿಲ್ಲೆ) ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ದೂರಿನ ಪ್ರಕಾರ, ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ ಐ ವಿಶ್ವನಾಥ್ ರೆಡ್ಡಿ ಮುದ್ರಡ್ಡಿ ಅವರು ಅಕ್ಕಿ ವ್ಯಾಪಾರ ನಡೆಸಲು ₹50 ಸಾವಿರ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ದೂರುದಾರರು ತಾವು ಬಡವರು ಎಂದು ಮನವಿ ಮಾಡಿದರೂ, ಹಣ ನೀಡಿದರೆ ಮಾತ್ರ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡುವುದಾಗಿ ಹೇಳಿದ್ದರೆಂದು ಆರೋಪಿಸಲಾಗಿದೆ.

ಇದರಂತೆ ಪಿಎಸ್‌ ಐ ಅವರು ನೀಡಿದ ಫೋನ್‌ ಪೇ ಸಂಖ್ಯೆಗೆ ದೂರುದಾರರು ಮೊದಲ ಹಂತವಾಗಿ 20 ಸಾವಿರ ರೂ. ವರ್ಗಾವಣೆ ಮಾಡಿದ್ದರು. ಬಳಿಕ ಉಳಿದ 30 ಸಾವಿರ ರೂ. ವನ್ನು ಶೀಘ್ರದಲ್ಲೇ ನೀಡಬೇಕು ಎಂದು ಪಿಎಸ್‌ ಐ ವಿಶ್ವನಾಥ್ ರೆಡ್ಡಿ ಮುದ್ರಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಸಿದ್ದಣ್ಣ ಬಿರಾದಾರ್ ಒತ್ತಾಯಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿ, ₹20 ಸಾವಿರ ಲಂಚ ಸ್ವೀಕರಿಸುವ ವೇಳೆ ಇಬ್ಬರನ್ನೂ ರೆಡ್‌ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಪೊಲೀಸ್ ಇನ್ಸ್‌ ಪೆಕ್ಟರ್ ಅರುಣ್ ಕುಮಾರ್ ಮುರುಗುಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ತನಿಖೆ ಮುಂದುವರಿದಿದೆ.

ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಕಾರ್ಯಾಚರಣೆಯ ವೇಳೆ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ರವಿ ಹಾಗೂ ರಾಜಶೇಖರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ENGLISH SUMMARY…

PSI, Police Staff Caught by Lokayukta for Bribery in Kalaburagi

Kalaburagi: Karnataka Lokayukta officials have trapped and arrested a PSI and a police staff member of Yadrami Police Station for allegedly demanding a bribe of ₹50,000 to facilitate rice trading activities.

Based on a complaint filed by Anand Kumar of Yadrami taluk, Lokayukta officials conducted a trap operation. The accused, PSI Vishwanath Reddy Mudraddi and police staff Siddanna Biradar, allegedly demanded ₹50,000, of which ₹20,000 was paid through PhonePe.

When the accused were receiving the bribe amount, Lokayukta officials caught them red-handed and arrested them.

The operation was carried out under the guidance of Siddharaju C., Superintendent of Police, Karnataka Lokayukta, Kalaburagi, and led by Police Inspector Arun Kumar Murugundi. Further investigation is underway, and the accused will be produced before the court following legal procedures.

#Lokayukta #Kalaburagi #BriberyCase #YadramiPolice #AntiCorruption #KarnatakaNews

Key words: PSI, Police Staff, Caught , Lokayukta, Bribery, Kalaburagi