Thursday, September 17, 2026

BDA Apartments

Home Cinema ಧರ್ಮಸ್ಥಳದ ‘ಸೌಜನ್ಯ ಪ್ರಕರಣ’ ಕುರಿತು ನಾಳೆ ನಟ ಪ್ರಕಾಶ್ ರಾಜ್ ಪತ್ರಿಕಾಗೋಷ್ಠಿ

ಧರ್ಮಸ್ಥಳದ ‘ಸೌಜನ್ಯ ಪ್ರಕರಣ’ ಕುರಿತು ನಾಳೆ ನಟ ಪ್ರಕಾಶ್ ರಾಜ್ ಪತ್ರಿಕಾಗೋಷ್ಠಿ

ಬೆಂಗಳೂರು,ಜೂನ್,16,2026 (www.justkannada.in): ನಟ ಪ್ರಕಾಶ್ ರಾಜ್ ಅವರು ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಬೆಂಗಳೂರಿನ ಬೆಂಗಳೂರು ಪ್ರೆಸ್ ಕ್ಲಬ್ (Bangalore Press Club) ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಕಾಶ್ ರಾಜ್, ಧರ್ಮಸ್ಥಳದ ಸೌಜನ್ಯ ಪ್ರಕರಣದ ಕುರಿತು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ, “ಮಾರಿಕೊಂಡ ಮಾಧ್ಯಮಗಳು (ಗೋದಿ ಮೀಡಿಯಾ) ವಿಶೇಷ ಆಹ್ವಾನಿತರು” ಎಂದು ವ್ಯಂಗ್ಯವಾಗಿ ಉಲ್ಲೇಖಿಸಿ ಗಮನ ಸೆಳೆದಿದ್ದಾರೆ.

ಧರ್ಮಸ್ಥಳದ ಸೌಜನ್ಯ ಪ್ರಕರಣವು ಹಲವು ವರ್ಷಗಳಿಂದ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ಮರುಪರಿಶೀಲನೆ ಮತ್ತು ನ್ಯಾಯಕ್ಕಾಗಿ ವಿವಿಧ ವಲಯಗಳಿಂದ ಆಗ್ರಹಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಅವರ ಪತ್ರಿಕಾಗೋಷ್ಠಿ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.ರಗಳನ BDA JK_Adv BDA Adv

ಪತ್ರಿಕಾಗೋಷ್ಠಿಯಲ್ಲಿ ಅವರು ಯಾವ ವಿಚಾರಗಳನ್ನು ಮುಂದಿರಿಸುತ್ತಾರೆ ಮತ್ತು ಪ್ರಕರಣದ ಕುರಿತು ಯಾವ ನಿಲುವು ವ್ಯಕ್ತಪಡಿಸುತ್ತಾರೆ ಎಂಬುದರ ಬಗ್ಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳಲ್ಲಿ ನಿರೀಕ್ಷೆ ಹೆಚ್ಚಿದೆ.cell press jk02_new jk02 new

Key words: Actor, Prakash Raj, press conference, Dharmasthala, Sowjanya Case