ಬೆಂಗಳೂರು,ಜೂನ್,16,2026 (www.justkannada.in): ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಶ್ವೇತಪತ್ರ ಹೊರಡಿಸಲಿ ಎಂದು ಹೇಳಿಕೆ ನೀಡಿದ್ದ ಬಿವೈ ವಿಜಯೇಂದ್ರಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಮೊದಲು ಪ್ರಧಾನಿ ಮೋದಿಗೆ ಶ್ವೇತಪತ್ರ ಹೊರಡಿಸಲು ಹೇಳಿ. ಪೆಟ್ರೋಲ್, ಡೀಸೆಲ್, ಸಿಲಿಂಡರ್, ಚಿನ್ನದ ಬೆಲೆ ಎಷ್ಟಾಗಿದೆ. ನೀವು ಸಹ ಇದೆಲ್ಲದರ ಪರಿಣಾಮಕ್ಕೆ ಒಳಗಾಗಿದ್ದೀರಿ ಅಲ್ವಾ? ವಿಶ್ವಗುರು ಅಚ್ಚೇದಿನ್ ಅಂದರು. ಆದರೆ ಇನ್ನೂ ಕೂಡ ಬಂದಿಲ್ಲ ಎಂದು ಟಾಂಗ್ ಕೊಟ್ಟರು.
ಆರ್ ಎಸ್ ಎಸ್ ನೋಂದಣಿ ಬಗ್ಗೆ ಮೋಹನ್ ಭಾಗವತ್ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ದೇಶದ ಎಲ್ಲಾ ಸಂಘಟನೆಗಳು ನೋಂದಣಿಯಾಗಿ ಲೆಕ್ಕ ಕೊಡೋದು ಕರ್ತವ್ಯ. ಗೃಹ ಸಚಿವರು ಲೆಕ್ಕ ಕೇಳಿದ್ದಾರೆ ಕೊಡಲಿ ಎಂದರು.
Key words: PM Modi, Minister, MB Patil, BY Vijayendra







