Tuesday, September 22, 2026

BDA Apartments

Home Front Page RSS ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ ಇನ್ಮುಂದೆ ಸಾಧ್ಯವಿಲ್ಲ- ಮೋಹನ್ ಭಾಗವತ್ ತಿರುಗೇಟು

RSS ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ ಇನ್ಮುಂದೆ ಸಾಧ್ಯವಿಲ್ಲ- ಮೋಹನ್ ಭಾಗವತ್ ತಿರುಗೇಟು

ತ್ರಿಶೂರ್,ಜೂನ್,15,2026 (www.justkannada.in): ಆರ್ ಎಸ್ಎಸ್ ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ ಇನ್ಮುಂದೆ ಸಾಧ್ಯವಿಲ್ಲ. ಎಲ್ಲಾ ಚಟುವಟಿಕೆಗಳು ತೆರೆದ ಮೈದಾನದಲ್ಲೇ ನಡೆಯುತ್ತಿದೆ. ಯಾವುದನ್ನೂ ಕದ್ದುಮುಚ್ಚಿ ಮಾಡುತ್ತಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿರುಗೇಟು ನೀಡಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಪತ್ರ ವಿಚಾರವಾಗಿ ಮಾತನಾಡಿದ ಮೋಹನ್ ಭಾಗವತ್,  ಸಚಿವರ ಪತ್ರಕ್ಕೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ನೋಂದಣಿ ಆಗದಿರುವ ಆನೇಕ ಚಟುವಟಿಕೆ ನಡೆಯುತ್ತವೆ. ನಾವು ಕದ್ದುಮುಚ್ಚಿ ಯಾವುದನ್ನೂ ಮಾಡುತ್ತಿಲ್ಲ.  ನಮ್ಮ ಎಲ್ಲಾ ಚಟುವಟಿಕೆಗಳು ತೆರೆದ ಮೈದಾನದಲ್ಲೇ ನಡೆಯುತ್ತವೆ. ರಾಜಕೀಯಕ್ಕಾಗಿ ಎಲ್ಲ ಗಿಮಿಕ್ ಗಳನ್ನೂ ಮಾಡಲಾಗುತ್ತೆ.  ನಮಗೆ ಇದರ ಅರಿವಿದೆ ಇದೆಲ್ಲಾ ಎದುರಿಸಿಕೊಂಡೇ ಬಂದಿದ್ದೇವೆ ಎಂದರು.RSS ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ ಇನ್ಮುಂದೆ ಸಾಧ್ಯವಿಲ್ಲ priyank kharge

ಹಿಂದೂ ಧರ್ಮ ನೋಂದಣಿಯಾಗಿಲ್ಲ. ಆರ್ ಎಸ್ ಎಸ್ ಕೂಡ ನೋಂದಣಿಯಾಗಿಲ್ಲ. ಸರ್ಕಾರದ ಅನುದಾನ ಬೇಕಿರುವವರು ನೋಂದಣಿ ಮಾಡುತ್ತಾರೆ. ಹಿಂದೆ ಎರಡು ಬಾರಿ ಆರ್ ಎಸ್ ಎಸ್ ಗೆ ನಿರ್ಬಂಧ ಹೇರಿದ್ದರು. ಒಂದು ಕೋರ್ಟ್ ಆದೇಶದ ಮೇಲೆ ನಿರ್ಬಂಧ ತೆರವಾಗಿತ್ತು.  ಕಳೆದ 100 ವರ್ಷಗಳಲ್ಲಿ ನಮಗೆ ಯಾರೂ ಸೂಚನೆ ಕೊಟ್ಟಿಲ್ಲ ನೋಂದಣಿ ಆಗಿ ಎಂದು ಸೂಚನೆ ಕೊಟ್ಟಿಲ್ಲ.  ಬ್ರಿಟಿಷರ ಕಾಲದಿಂದಲೂ ಆರ್ ಎಸ್ಎಸ್ ಇದೆ.  ಹೀಗಾಗಿ ನಾನು ಇದಕ್ಕೆಲ್ಲಾ ಏಕೆ ಉತ್ತರ ಕೊಡಬೇಕು? ಎಂದು ಪ್ರಶ್ನಿಸಿದರು.ಮೋಹನ್ ಭಾಗವತ್ ತಿರುಗೇಟು jk02_new jk02 new

Key words: Creating, doubts, RSS, Priyank Kharge, Mohan Bhagwat