ಬೆಂಗಳೂರು,ಜೂನ್,13,2026 (www.justkannada.in): ಆಗಾಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರುತ್ತಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇದೀಗ ಸಿಎಂ ಡಿಕೆ ಶಿವಕುಮಾರ್ ಗೆ ಸಲಹೆಯೊಂದನ್ನ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಡಿಕೆ ಶಿವಕುಮಾರ್ ಅವರೇ ಸಿದ್ದರಾಮಯ್ಯರಿಂದ ಹುಷಾರಾಗಿರಿ. ಸಿದ್ದರಾಮಯ್ಯರಿಂದ ಸಲಹೆ ತೆಗೆದುಕೊಳ್ಳಬೇಡಿ ಎಂದು ಹೇಳುವುದಿಲ್ಲ. ಎಷ್ಟು ಬೇಕು ಅಷ್ಟು ಮಾತ್ರ ಸಲಹೆ ತೆಗೆದುಕೊಳ್ಳಿ ಎಂದರು.
ಹಾಗೆಯೇ ಸಿಎಂ ಡಿಕೆ ಶಿವಕುಮಾರ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಏನು ಮಾಡೋಕೆ ಆಗಲ್ಲ ಎಂದು ಹೆಚ್ ವಿಶ್ವನಾಥ್ ಹೇಳಿದರು.
Key words: Be careful, CM, DK Shivakumar, Siddaramaiah, MLC, H. Vishwanath







