ಮೈಸೂರು,ಜೂನ್,10,2026 (www.justkannada.in): ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ 12 ವರ್ಷ ಪೂರೈಸಿದ್ದು ಪ್ರಧಾನಿ ಮೋದಿ ಅವರ 12 ವರ್ಷದ ಸಾಧನೆಯನ್ನ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿವರಿಸಿ ಶ್ಲಾಘಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಯದುವೀರ್ ಒಡೆಯರ್, ಮೋದಿ ಪ್ರಧಾನಿಯಾಗಿ 12 ವರ್ಷ ಸೇವೆ ಮಾಡಿದ್ದಾರೆ. ದೇಶದ ಸರ್ವತೋಮುಖ ಅಭಿವೃದಿಗೆ ಶ್ರಮಿಸುತ್ತಿದ್ದಾರೆ. ವಿಕಸಿತ ಭಾರತ ನಿರ್ಮಾಣ ಮಾಡಲು ಅಡಿಗಲ್ಲು ಹಾಕಿದರು. ಮೋದಿ ಪ್ರಧಾನಿಯಾಗುವ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸರಿಯಿರಲಿಲ್ಲ ಇದೀಗ ಆರ್ಥಿಕತೆಯಲ್ಲಿ ದೇಶ ಮುಂದಿದೆ. ವಿದೇಶಿ ಕಂಪನಿಗಳು ಕೂಡ ಭಾರತಕ್ಕೆ ಬರುತ್ತಿವೆ. 25 ಕೋಟಿ ಜನರು ಬಡತನ ರೇಖೆಯಿಂದ ಹೊರಗಡೆ ಬಂದಿದ್ದಾರೆ. ಇದು ಮೋದಿ ಸರ್ಕಾರದ ಸಾಧನೆ ಎಂದು ಬಣ್ಣಿಸಿದರು.
ರೈತರ ಖಾತೆಗೆ ನೇರವಾಗಿ 6 ಸಾವಿರ ಹಣ ಖಾತೆಗೆ ಹೋಗುತ್ತಿದೆ. 4.5 ಲಕ್ಷ ಕೋಟಿ ಇದಕ್ಕೆ ವಿನಿಯೋಗ ಆಗುತ್ತಿದೆ. ಮಹಿಳೆಯರ ಸ್ವ ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ. ಯುವಕರಿಗೆ ಸ್ಕಿಲ್ ತರಬೇತಿ ಕೊಡಲಾಗುತ್ತಿದೆ. ದೇಶೀಯ ಗುಣಮಟ್ಟದ ಉತ್ಪನ್ನಗಳಿಗೆ ವಿದೇಶಿಗಳಿಂದ ಬೇಡಿಕೆ ಹೆಚ್ಚಿದೆ. ವಿಶ್ವಮಟ್ಟದಲ್ಲಿ ಭಾರತಕ್ಕೆ ದೊಡ್ಡ ಮಟ್ಟದ ಗೌರವ ಸಿಗುತ್ತಿದೆ. ಇದೆಲ್ಲವೂ ಕೂಡ ಮೋದಿ ಸರ್ಕಾರದ ಸಾಧನೆ ಎಂದರು.
ರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ದೇಶದ ಜನರ ಕನಸು ನನಸು ಮಾಡಿದರು. ಯೋಗವನ್ನು ವಿಶ್ವಕ್ಕೆ ಪರಿಚಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದರು. ಡಿಜಿಟಲ್ ಇಂಡಿಯಾ, ಕ್ಯಾಸ್ ಲೆಸ್ ಡಿಜಿಟಲ್ ವ್ಯವಸ್ಥೆ ಎಲ್ಲವನ್ನೂ ಮಾಡಿದರು. ಇದೆಲ್ಲವೂ ಪ್ರಧಾನಿ ಮೋದಿ ಸರ್ಕಾರದ ಸಾಧನೆ ಎಂದರು.
ನಕ್ಸಲಿಸಂ ಕಿತ್ತು ಹಾಕಿದ್ದಾರೆ. ಕಾಶ್ಮೀರದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಜೊತೆಗೆ ದೇಶದಲ್ಲಿ ಜಾತಿಗಣತಿ ಆಗುತ್ತಿದೆ. ಅದಕ್ಕಾಗಿ ನಾವು ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಮೋದಿ ಅವರ ಆಶಯದಂತೆ ನಾವು ಕೂಡ ಕೆಲಸ ಮಾಡುತ್ತೇವೆ ಎಂದು ಸಂಸದ ಯದುವೀರ್ ಒಡೆಯರ್ ನುಡಿದರು.
Key words: 12 years, PM, Modi, achievements, MP, Yaduveer






