Monday, September 14, 2026

BDA Apartments

Home Front Page ಕಂದಾಯ ಇಲಾಖೆಯಲ್ಲಿ ಕೃಷ್ಣೇಬೈರೇಗೌಡ ಒಳ್ಳೇ ಕೆಲಸ ಮಾಡಿ ಬದಲಾವಣೆ ತಂದಿದ್ದಾರೆ- ಸಚಿವ ಪರಮೇಶ್ವರ್

ಕಂದಾಯ ಇಲಾಖೆಯಲ್ಲಿ ಕೃಷ್ಣೇಬೈರೇಗೌಡ ಒಳ್ಳೇ ಕೆಲಸ ಮಾಡಿ ಬದಲಾವಣೆ ತಂದಿದ್ದಾರೆ- ಸಚಿವ ಪರಮೇಶ್ವರ್

ಬೆಂಗಳೂರು,ಜೂನ್,6,2026 (www.justkannada.in): ಕಂದಾಯ ಇಲಾಖೆಯಲ್ಲಿ ಕೃಷ್ಣೇಬೈರೇಗೌಡರು ಒಳ್ಳೇ ಕೆಲಸ ಮಾಡಿ ಬದಲಾವಣೆ ತಂದಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಡಿಸಿಎಂ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್, ನಿನ್ನೆಯಷ್ಟೆ ಇಲಾಖೆ ಅಧಿಕಾರಿಗಳ ಸಭೆ ಮಾಡಿದ್ದೇನೆ ಸಮಯ ಬಹಳ ಕಡಿಮೆ ಇದೆ.  ಎರಡೇ ವರ್ಷ ಇರೋದು . ಕಾಲಮಿತಿಯಲ್ಲಿ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇನೆ.  ಈ ಇಲಾಖೆಯಲ್ಲಿ ಕೃಷ್ಣಭೈರೇಗೌಡ ಒಳ್ಳೇ ಕೆಲಸ ಮಾಡಿದ್ದಾರೆ. ಉತ್ತಮ ಬದಲಾವಣೆ ಮಾಡಿದ್ದಾರೆ ಅದನ್ನು ಮುಂದುವರಿಸಬೇಕು ಎಂದರು.

ಸಚಿವ ಸ್ಥಾನಕ್ಕೆ ರಾಮಲಿಂಗರೆಡ್ಡಿ ರಾಜೀನಾಮೆ ವಿಚಾರ, ಪಕ್ಷದ ಮುಖಂಡರು ಅದನ್ನ ಶೀಘ್ರದಲ್ಲೇ ಬಗೆಹರಿಸುತ್ತಾರೆ. ಅದೇನು ದೊಡ್ಡ ವಿಚಾರ  ಅಲ್ಲ.  ನಿನ್ನೆ ರಾಮಲಿಂಗರೆಡ್ಡಿ ಜೊತೆ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.  ಎಲ್ಲ ಸಮಸ್ಯೆ ಇತ್ಯರ್ಥವಾಗುತ್ತೆ. ಸಚಿವ ಮುನಿಯಪ್ಪಗೆ ಯಾವುದೇ ಅಸಮಾಧಾನವಿಲ್ಲ  ನಿನ್ನೆ ರಾಹುಲ್ ಗಾಂಧಿ ಬಂದಾಗ ನಮ್ಮ ಜೊತೆಗೆ ಕೂತು ಮಾತನಾಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.ಸಚಿವ ಪರಮೇಶ್ವರ್ jk02

Key words:  Krishnabaire Gowda, good job, Revenue Department, Minister, Parameshwar