ಬೆಂಗಳೂರು,ಜೂನ್,5,2026 (www.justkannada.in): ಬೆಂಗಳೂರು ಅಭಿವೃದ್ದಿ ಖಾತೆ ಬದಲು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಸಚಿವ ಸ್ಥಾನಕ್ಕೆ ರಾಮಲಿಂಗರೆಡ್ಡಿ ರಾಜೀನಾಮೆ ನೀಡಿದ ಬೆನ್ನಲ್ಲೆ ಇದೀಗ ಸಚಿವ ಕೆ.ಎಚ್ ಮುನಿಯಪ್ಪ ಸಹ ಖಾತೆ ಹಂಚಿಕೆ ವಿಚಾರವಾಗಿ ಬಹಿರಂಗ ಅಸಮಾಧಾನ ಹೊರ ಹಾಕಿದ್ದಾರೆ.
ತಮಗೆ ಹಿಂದೆ ನೀಡಿದ್ದ ಆಹಾರ ಖಾತೆಯನ್ನೇ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಸಚಿವ ಕೆ.ಎಚ್ ಮುನಿಯಪ್ಪ. ನಾನು ಸಮಾಜ ಕಲ್ಯಾಣ ಇಲಾಖೆ ಅಥವಾ ಕೃಷಿ ಖಾತೆ ಕೇಳಿದ್ದೆ. ಆದರೆ ಆಹಾರ ಖಾತೆಯನ್ನೇ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರನ್ನೂ ಒಂದೇ ರೀತಿ ನೋಡಬೇಕು ಖಾತೆ ಸರಿಯಾಗಿಲ್ಲ. ಈ ರೀತಿ ಮಾಡಿದರೆ 2028ಕ್ಕೆ ಕಷ್ಟ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿನಿಯಾರಿಟಿ ನೋಡಿಲ್ಲ. ಸಮತೋಲನವಾಗಿಲ್ಲ. ನಾನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭೇಟಿ ಮಾಡುತ್ತೇನೆ ಎಲ್ಲರನ್ನೂ ಸಹ ಒಂದೇ ರೀತಿಯಲ್ಲಿ ನೋಡಬೇಕು ಎನ್ನುತ್ತೇನೆ. ನನ್ನ ಖಾತೆಯನ್ನ ಬದಲಾವಣೆ ಮಾಡಿ ಎಂದು ಮನವಿ ಮಾಡುತ್ತೇನೆ.
ಜನಸೇವೆ ಮಾಡಬೇಕಾದ ಖಾತೆ ನೀಡುವಂತೆ ಕೇಳುತ್ತೇನೆ . ಸಿನಿಯಾರಿಟಿ ನೋಡಿಕೊಂಡು ಖಾತೆ ಹಂಚಬೇಕು. ನಾನು 8 ಬಾರಿ ಗೆದ್ದಿದ್ದೇನೆ. ಸಿನಿಯಾರಿಟಿ ನೋಡಬೇಕಿತ್ತು. ಖಾತೆ ಸಮಸ್ಯೆ ಬಗೆಹರಿಸ್ತಾರೆಂಬ ವಿಶ್ವಾಸವಿದೆ ಎಂದು ಮುನಿಯಪ್ಪ ತಿಳಿಸಿದರು.
Key words: Minister, KH Muniyappa, displeasure, portfolio, allocation issue.






