Wednesday, September 9, 2026

BDA Apartments

Home Front Page SIR ಪ್ರಕ್ರಿಯೆ: ಯಾರೂ ಕೂಡ ಮತದಾನದ ಹಕ್ಕು ಕಳೆದುಕೊಳ್ಳದಂತೆ ಕ್ರಮ ವಹಿಸಿ- ಸಿಎಂ ಡಿಕೆ ಶಿವಕುಮಾರ್

SIR ಪ್ರಕ್ರಿಯೆ: ಯಾರೂ ಕೂಡ ಮತದಾನದ ಹಕ್ಕು ಕಳೆದುಕೊಳ್ಳದಂತೆ ಕ್ರಮ ವಹಿಸಿ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,4,2026 (www.justkannada.in): ಚುನಾವಣಾ ಆಯೋಗದಿಂದ ಎಸ್ ಐಆರ್ ಪ್ರಕ್ರಿಯೆ ನಡೆಯುತ್ತಿದೆ.  ಯಾರುಕೂಡ ಮತದಾನದ ಹಕ್ಕು ಕಳೆದುಕೊಳ್ಳಬಾರದು.  ಮತದಾನದ ಹಕ್ಕು ಕಳೆದಕೊಳ್ಳದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಎಸ್ ಐಆರ್ ವಿಚಾರವಾಗಿ ಜನರಿಂದ ಮಾಹಿತಿ ಪಡೆದುಕೊಳ್ಳಿ.  ತಪ್ಪುದಾರಿಗೆ ಎಳೆಯದೆ ಎಸ್ ಐಆರ್ ‍ಪ್ರಕ್ರಿಯೆ ನಡೆಯಬೇಕು ಎಲ್ಲಾ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು.  ಎಲ್ಲ ಸಿದ್ದತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದರು.

ಎಸ್ ಐಆರ್ ವಿಚಾರವಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ನೇಮಕ  ಮಾಡಲಾಗುತ್ತದೆ. ಎಸ್ ಐಆರ್ ನಿಂದ ಅನೇಕ ರಾಜ್ಯಗಳಲ್ಲಿ ಜನ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಕೆರಳದಲ್ಲಿ ಎಸ್ ಐಆರ್ ಪ್ರಕ್ರಿಯೆ ಚೆನ್ನಾಗಿ ನಡೆದಿದೆ. ಬೇರೆ ರಾಜ್ಯಗಳಲ್ಲಿ ಹೆಚ್ಚು ಜನ ಮತದಾನದ ಹಕ್ಕು ಕಳೆದು ಕೊಂಡಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

Key words: SIR, process, vote, CM, DK Shivakumar