Saturday, September 5, 2026

BDA Apartments

Home Front Page ‘ಸಿದ್ಧಾಂತ ನಿಷ್ಠರಿಗೆ ಹಾದಿ ಯಾವಾಗಲೂ ಕಠಿಣವೇ’- ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ರಾ HK...

‘ಸಿದ್ಧಾಂತ ನಿಷ್ಠರಿಗೆ ಹಾದಿ ಯಾವಾಗಲೂ ಕಠಿಣವೇ’- ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ರಾ HK ಪಾಟೀಲ್

ಬೆಂಗಳೂರು,ಜೂನ್,3,2026 (www.justkannada.in): ಇಂದು ಡಿಕೆ ಶಿವಕುಮಾರ್ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು ಜೊತೆಗೆ 14 ಮಂದಿ ಸಚಿವರಾಗಿ ಪದಗ್ರಹಣ ಮಾಡುತ್ತಿದ್ದಾರೆ. ಈ ಮಧ್ಯೆ ತಮಗೆ  ಮತ್ತೆ ಸಚಿವ ಸ್ಥಾನ ಸಿಗದಿದ್ದಕ್ಕೆ ಹೆಚ್.ಕೆ ಪಾಟೀಲ್ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವ ಹೆಚ್.ಕೆ ಪಾಟೀಲ್,  ಮಹಾಜನತೆ, ನನ್ನ ಮೇಲಿಟ್ಟಿರುವ   ಪ್ರೀತಿ, ವಿಶ್ವಾಸ ಮತ್ತು ಅಭಿಮಾನಕ್ಕೆ ನಾನು ಸದಾ ಚಿರಋಣಿ. ಸಿದ್ಧಾಂತ ನಿಷ್ಠರಿಗೆ ಹಾದಿ ಯಾವಾಗಲೂ ಕಠಿಣವೇ, ಹೈಕಮಾಂಡ್ ನಿರ್ಧಾರಕ್ಕೆ ಒಪ್ಪೋಣ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

Key words: HK Patil, displeasure, losing, ministerial post