ಡಿಸಿಎಂ ಕುರ್ಚಿ ಮೇಲೆ  “NEPO KIDS” ಕಣ್ಣು; ಕಾಂಗ್ರೆಸ್‌ನಲ್ಲಿ ಸಮತೋಲನದ ಸವಾಲು

As Karnataka prepares for the swearing-in of Chief Minister-designate D. K. Shivakumar on Wednesday, intense discussions are underway over the formation of the new Cabinet and the possible creation of multiple Deputy Chief Minister (DCM) posts. According to political sources, the government may appoint two to four DCMs to balance regional and social equations. However, the move has triggered a tussle between senior leaders and political heirs, with several "nepo kids" reportedly lobbying for the coveted post.

 

ಬೆಂಗಳೂರು, ಜೂ.೦೨,೨೦೨೬ : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ (D. K. Shivakumar) ಅವರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದರ ಜೊತೆಗೆ ಮೊದಲ ಹಂತದ ಸಚಿವ ಸಂಪುಟವೂ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದ್ದು, ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇದಕ್ಕೂ ಮೀರಿದಂತೆ, ಉಪ ಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳ ಸೃಷ್ಟಿಯ ವಿಚಾರ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಪಕ್ಷದ ಕೆಲವು ಮೂಲಗಳ ಪ್ರಕಾರ, ಈ ಬಾರಿ ಕೇವಲ ಒಬ್ಬರಿಗಲ್ಲದೆ 2 ರಿಂದ 4 ಮಂದಿವರೆಗೆ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಪ್ರಾದೇಶಿಕ, ಜಾತಿ ಹಾಗೂ ರಾಜಕೀಯ ಸಮತೋಲನ ಸಾಧಿಸುವ ಉದ್ದೇಶದಿಂದ ಈ ಕ್ರಮಕ್ಕೆ ನಾಯಕತ್ವ ಮುಂದಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಡಿಸಿಎಂ ಹುದ್ದೆಗಾಗಿ ಹೊಸ ಮುಖಗಳ ಲಾಬಿ:

ಡಿಸಿಎಂ ಹುದ್ದೆ ಸೃಷ್ಟಿಯ ಚರ್ಚೆ ಆರಂಭವಾಗುತ್ತಿದ್ದಂತೆಯೇ ಹಲವು ಹೊಸ ಮುಖಗಳು ಹಾಗೂ ಯುವ ನಾಯಕರು ಆ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ರಾಜಕೀಯ ಕುಟುಂಬಗಳಿಂದ ಬಂದಿರುವ ಕೆಲವು ನಾಯಕರ ಪುತ್ರರು ಮತ್ತು ವಾರಸುದಾರರು ಡಿಸಿಎಂ ಸ್ಥಾನಕ್ಕಾಗಿ ಪ್ರಬಲ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿವೆ.

ಈ ಬೆಳವಣಿಗೆಗಳ ನಡುವೆ ನಿರ್ಗಮಿತ ಮುಖ್ಯಮಂತ್ರಿ  ಸಿದ್ದರಾಮಯ್ಯ (Siddaramaiah) ಅವರು ಈಗಾಗಲೇ ತಮ್ಮ ಪುತ್ರನಿಗೆ ಡಿಸಿಎಂ ಸ್ಥಾನ ಬೇಡ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆ ಎನ್ನುವ ಚರ್ಚೆಗಳೂ ನಡೆದಿವೆ. ಆದರೆ ಕೆಲವು ರಾಜಕೀಯ ಕುಟುಂಬಗಳ ವಾರಸುದಾರರು ತಮ್ಮ ಕುಟುಂಬದ ರಾಜಕೀಯ ಪ್ರಭಾವ ಮತ್ತು ಹಿರಿಯ ನಾಯಕರ ಬೆಂಬಲದ ಆಧಾರದ ಮೇಲೆ ಉನ್ನತ ಹುದ್ದೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹಿರಿಯ ನಾಯಕರ ಅಸಮಾಧಾನ? :

ಡಿಸಿಎಂ ಹುದ್ದೆಗಳನ್ನು ಕಿರಿಯ ನಾಯಕರಿಗೆ ನೀಡುವ ಸಾಧ್ಯತೆ ಕಾಂಗ್ರೆಸ್‌ನ ಹಿರಿಯ ನಾಯಕರ ವಲಯದಲ್ಲಿ ಅಸಮಾಧಾನಕ್ಕೂ ಕಾರಣವಾಗುತ್ತಿದೆ ಎನ್ನಲಾಗಿದೆ. ದಶಕಗಳ ಕಾಲ ಪಕ್ಷ ಸಂಘಟನೆಗಾಗಿ ದುಡಿದು, ಅನೇಕ ಹೋರಾಟಗಳಲ್ಲಿ ಪಾಲ್ಗೊಂಡು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪಾತ್ರವಹಿಸಿರುವ ಹಿರಿಯರು, ತಮಗಿಂತ ಕಿರಿಯರಿಗೆ ಡಿಸಿಎಂ ಸ್ಥಾನ ನೀಡಿ ತಮಗೆ ಸಾಮಾನ್ಯ ಸಚಿವ ಸ್ಥಾನ ನೀಡಿದರೆ ಅದು ರಾಜಕೀಯವಾಗಿ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

“ಹಿರಿಯರನ್ನು ಕಡೆಗಣಿಸಿ ಕಿರಿಯರನ್ನು ಮೇಲಕ್ಕೆತ್ತಿದರೆ ಸಚಿವ ಸಂಪುಟ ಸೇರ್ಪಡೆ ಬಗ್ಗೆ ಮರುಚಿಂತನೆ ಮಾಡಬೇಕಾಗಬಹುದು” ಎಂಬ ಸಂದೇಶವನ್ನು ಕೆಲ ನಾಯಕರು ಪಕ್ಷದ ಹೈಕಮಾಂಡ್‌ಗೆ ತಲುಪಿಸಿರುವ ಸಾಧ್ಯತೆಯೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಸಮತೋಲನ ಸಾಧಿಸುವುದು ನಾಯಕತ್ವಕ್ಕೆ ಸವಾಲು:

ಹೊಸ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ, ಹಿರಿಯ-ಕಿರಿಯರ ಪ್ರತಿನಿಧಿತ್ವ ಹಾಗೂ ವಿವಿಧ ಗುಂಪುಗಳ ಬೇಡಿಕೆಗಳನ್ನು ಸಮತೋಲನಗೊಳಿಸುವುದು ನಾಯಕತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಚಿವ ಸ್ಥಾನ ಹಾಗೂ ಡಿಸಿಎಂ ಹುದ್ದೆಗಳ ಹಂಚಿಕೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಹಲವು ಸುತ್ತಿನ ಸಮಾಲೋಚನೆಗಳು ನಡೆದಿವೆ ಎಂದು ತಿಳಿದುಬಂದಿದೆ.

ನಾಳೆ ಎಲ್ಲಾ ಗೊಂದಲಗಳಿಗೆ ತೆರೆ?

ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವ ಸಮಾರಂಭ ರಾಜ್ಯದ ಗಮನ ಸೆಳೆದಿದ್ದು, ಸಚಿವ ಸಂಪುಟದಲ್ಲಿ ಯಾರು ಸ್ಥಾನ ಪಡೆಯುತ್ತಾರೆ? ಎಷ್ಟು ಡಿಸಿಎಂ ಹುದ್ದೆಗಳು ಸೃಷ್ಟಿಯಾಗುತ್ತವೆ? ಯಾವ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಲಿದೆ? ಎಂಬ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗುವ ನಿರೀಕ್ಷೆಯಿದೆ.

ಒಟ್ಟಾರೆ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಊಹಾಪೋಹಗಳು, ಲಾಬಿಗಳು, ಅಸಮಾಧಾನಗಳು ಮತ್ತು ರಾಜಕೀಯ ಲೆಕ್ಕಾಚಾರಗಳಿಗೆ ನಾಳೆಯ ಪ್ರಮಾಣವಚನ ಸಮಾರಂಭ ಪೂರ್ಣ ವಿರಾಮ ಹಾಕುವ ವಿಶ್ವಾಸ ವ್ಯಕ್ತವಾಗಿದ್ದು, ಕರ್ನಾಟಕದ ಹೊಸ ಸರ್ಕಾರದ ರೂಪುರೇಷೆ ಹೇಗಿರಲಿದೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

key words: “DCM Tug-of-War, Nepo Kids, vs Veterans, DK Shivakumar’s Swearing-In”

SUMMARY:

“DCM Tug-of-War: Nepo Kids vs Veterans Ahead of DK Shivakumar’s Swearing-In”

DK Shivakumar to Take Oath as Karnataka CM Tomorrow; DCM Race Sparks Debate

As Karnataka prepares for the swearing-in of Chief Minister-designate D. K. Shivakumar on Wednesday, intense discussions are underway over the formation of the new Cabinet and the possible creation of multiple Deputy Chief Minister (DCM) posts.

According to political sources, the government may appoint two to four DCMs to balance regional and social equations. However, the move has triggered a tussle between senior leaders and political heirs, with several “nepo kids” reportedly lobbying for the coveted post.

Meanwhile, former CM Siddaramaiah is said to have ruled out any demand for a DCM post for his son. Senior Congress leaders are also believed to be unhappy over reports that younger leaders could be elevated as DCMs while veterans are offered only ministerial berths.

With competing aspirations, seniority concerns, and power-sharing calculations at play, all eyes are now on Wednesday’s swearing-in ceremony, which is expected to put an end to the speculation and reveal the final shape of Karnataka’s new government.