ಬೆಂಗಳೂರು,ಜೂನ್,1,2026 (www.justkannada.in): ರಾಜ್ಯದಲ್ಲಿ ಸರ್ಕಾರ ನಡೆಸಲು ಆಗಲ್ಲ ಅಂತಾ ಗೊತ್ತಾಗಿದ್ದರಿಂದಲೇ ಸಿದ್ದರಾಮಯ್ಯ ಸೈಲೆಂಟ್ ಆಗಿ ರಾಜೀನಾಮೆ ಕೊಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಬಸ್ ಇಂಜಿನ್ ಸೀಜ್ ಆಗಿದೆ ಅಂತ ಗೊತ್ತಾಗಿದ್ದರಿಂದಲೇ ಸಿದ್ದರಾಮಯ್ಯ ಸೈಲೆಂಟ್ ಆಗಿ ರಾಜೀನಾಮೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅಭಿವೃದ್ಧಿ ಮಾಡಲು ಈಗ ಹಣ ಎಲ್ಲಿದೆ? ಸರ್ಕಾರ ನಡೆಸಲು ಆಗಲ್ಲ ಅಂತ ಗೊತ್ತಾಗಿದ್ದರಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಇಲ್ಲದಿದ್ದರೆ ವೈಲೆಂಟ್ ಸಿದ್ದರಾಮಯ್ಯ ಬಿಡುತ್ತಿದ್ದರಾ? ಎಂದರು.
ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ಮಾಡಿರುವ ಸಾಲವನ್ನು ಹೇಗೆ ನಿರ್ವಹಿಸುತ್ತೀರಾ? ಗೃಹಲಕ್ಷ್ಮೀ ಬಾಕಿ ಹಣ 5 ಸಾವಿರ ಕೋಟಿ ಕೊಡದಿದ್ದರೆ ಬಿಡಲ್ಲ. ಯಾವುದೇ ಹೋರಾಟವಾದರೂ ಸರಿ ನಾನು ಇಳಿಯುತ್ತೇನೆ. ಅನ್ನಭಾಗ್ಯ ಯೋಜನೆಯ 700 ಕೋಟಿ ಕೊಡಿಸುಯೇ ತೀರುತ್ತೇನೆ ಎಂದರು.
Key words: Siddaramaiah, silently, resigned, government, R. Ashok







