ಹಿಂದುಳಿದ ವರ್ಗದಿಂದ ಬಂದಿರುವೆ: ಅವಕಾಶ ಕೊಡಿ- ಶಾಸಕ ಬೇಳೂರು ಗೋಪಾಲಕೃಷ್ಣ

ಬೆಂಗಳೂರು,ಮೇ,30,2026 (www.justkannada.in):  ರಾಜ್ಯದಲ್ಲಿ ಡಿಕೆ ಶಿವಕುಮಾರ್  ಸಿಎಂ ಆಗಲಿದ್ದಾರೆಂಬುದು ಈಗಾಗಲೇ  ಬಹಿರಂಗವಾಗಿದ್ದು ಸಿಎಲ್ ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿ  ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.  ಈ ನಡುವೆ ನೂತನ ಸಂಪುಟಕ್ಕೆ ಸೇರ್ಪಡೆಯಾಗಲು ಶಾಸಕರ ಲಾಬಿ ಹೆಚ್ಚಾಗಿದ್ದು ಶಾಸಕ ಬೇಳೂರು ಗೋಪಾಲಕೃಷ್ಣ ಸಹ ತಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ನಮಗೆ ಸಚಿವ ಸ್ಥಾನ ಕೊಡುವಂತೆ ಕೇಳಲು ಹಕ್ಕಿದೆ. ಕೇಳುತ್ತೇವೆ. ನಾನು ಹಿಂದುಳಿದ ವರ್ಗದಿಂದ ಬಂದಿರುವೆ ಅವಕಾಶ ಕೊಡಿ.  ನಾನು  ಭಿನ್ನಮತ, ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ ಎಂದು ಹೇಳಿದ್ದಾರೆ.

Key words: Aspirant,  ministerial post, MLA, Belur Gopalkrishna