Sunday, August 30, 2026

BDA Apartments

Home Front Page ಸಿದ್ಧರಾಮಯ್ಯ ವಿರುದ್ದ ಯಾವ ಸಹಿ ಸಂಗ್ರಹವಾಗಿಲ್ಲ, ಅದೆಲ್ಲಾ ಊಹಾಪೋಹ- ಸತೀಶ್ ಜಾರಕಿಹೊಳಿ

ಸಿದ್ಧರಾಮಯ್ಯ ವಿರುದ್ದ ಯಾವ ಸಹಿ ಸಂಗ್ರಹವಾಗಿಲ್ಲ, ಅದೆಲ್ಲಾ ಊಹಾಪೋಹ- ಸತೀಶ್ ಜಾರಕಿಹೊಳಿ

ಬೆಂಗಳೂರು,ಮೇ,29,2026 (www.justkannada.in):  ಸಿದ್ದರಾಮಯ್ಯ ವಿರುದ್ದ ಯಾವ ಶಾಸಕರ ಸಹಿ ಸಂಗ್ರಹವೂ ಆಗಿಲ್ಲ. ಅದೆಲ್ಲಾ ಸುಳ್ಳು, ಊಹಾಪೋಹ ಎಂದು ಶಾಸಕ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಶಾಸಕರೆಲ್ಲಾ ಸಹಿ ಮಾಡಿದ್ದಾರೆಂಬುದು ಊಹಾಪೋಹ. ಯಾವುದೇ ರೀತಿ ಸಹಿ ಸಂಗ್ರಹವಾಗಿಲ್ಲ. ಹೈಕಮಾಂಡ್ ನಿರ್ಧಾರದಂತೆ ರಾಜೀನಾಮೆ ನೀಡಿದ್ದಾರೆ. ಒಪ್ಪಂದದ ಪ್ರಕಾರವೇ ಎಲ್ಲಾ ಪ್ರಕ್ರಿಯೆ ನಡೆದಿದೆ. ಯಾರನ್ನ ಕೇಳಿ ನಿರ್ಧಾರ ತೆಗೆದುಕೊಂಡಿಲ್ಲ.  ದೆಹಲಿ ಹಂತದಲ್ಲಿ ಆಗಿರೋದು ಯಾರಿಗೂ ಗೊತ್ತಿಲ್ಲ ಎಂದರು.

ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಕೆಳಗಿಳಿಯಲೇಬೇಕಿತ್ತು. ನಾಯಕತ್ವ ವಿಚಾರದ ಮಾತುಕತೆ ದೆಹಲಿಯಲ್ಲೇ ಆಗಿರುವುದು. ಬೆಂಗಳೂರಿನಲ್ಲಿ ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ಆಗಿರಲಿಲ್ಲ. 2 ವರ್ಷಗಳ ನಂತರವಾದರೂ ಸಿದ್ದರಾಮಯ್ಯ ಇಳಿಯಲೇಬೇಕಲ್ಲವಾ ಎಲ್ಲಾ ಸಂದರ್ಭದಲ್ಲೂ ರೆಡಿ ಇರಬೇಕು  ಎಂದರು.

ಹೈಕಮಾಂಡ್ ಜೊತೆ ಮಾತನಾಡಿ ಇಬ್ಬರು ಬರುತ್ತಾರೆ. ಬಂದ ಬಳಿಕ ಫೈನಲ್ ಆಗುತ್ತೆ.  ಕೆಪಿಸಿಸಿ ಅಧ್ಯಕ್ಷ  ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಎಷ್ಟು ಜನ ಡಿಸಿಎಂ ಆಗ್ರಾರೆ ಎಂಬುದು.  ಹೆಚ್ಚುವರಿ ಡಿಸಿಎಂ ಆಗಬಹುದು. ಆಗದೆ ಇರಬಹುದು.  ಸಿಎಲ್ ಪಿ ಸಭೆ ಬಳಿಕ ಡಿಸಿಎಂ ಹುದ್ದೆ ಬಗ್ಗೆ ನಿರ್ಧಾರವಾಗಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: No sign, collected, against, Siddaramaiah, Satish Jarkiholi