Thursday, October 15, 2026

Dasara Wishes

Happy Dasara
Home Front Page ಪಕ್ಷದಲ್ಲಿನ ಹಿರಿಯರು ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ- ಶಾಸಕ ಇಕ್ಬಾಲ್ ಹುಸೇನ್

ಪಕ್ಷದಲ್ಲಿನ ಹಿರಿಯರು ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ- ಶಾಸಕ ಇಕ್ಬಾಲ್ ಹುಸೇನ್

ರಾಮನಗರ,ಮೇ,28,2026 (www.justkannada.in): ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಹಿರಿಯರು ಇದ್ದಾರೆ ಅವರು ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.

ರಾಜ್ಯ ರಾಜಕೀಯ ಬೆಳವಣಿಗೆಯ ಬಗ್ಗೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ಲಕ್ಷಾಂತರ ಕಾರ್ಯಕರ್ತರ ಆಸೆಯನ್ನ ಭಗವಂತ ಈಡೇರಿಸುತ್ತಿದ್ದಾನೆ. ನಾನು ಮೌನ ಮುರಿದು ಮಾತಾಡುತ್ತಿದ್ದೇನೆ ನಮ್ಮ ನಾಯಕರಿಗೆ ಒಂದು ಅವಕಾಶ ಸಿಗುತ್ತಿದೆ.  ಪರಮೇಶ್ವರ್ ಕೂಡ ನಮ್ಮ ನಾಯಕರು ಕೆಪಿಸಿಸಿ ಅಧ್ಯಕ್ಷರಾಗಿದ್ದರು ಪರಮೇಶ್ವರ್  ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನು ಇದೆ ಎಂದರು.

ಡಿಕೆ ಶಿವಕುಮಾರ್ ಸಿಎಂ ಸ್ಥಾನ ತುಂಬಬೇಕೆಂಬುದು ನಮ್ಮ ಅಭಿಲಾಷೆ.  ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಹಿರಿಯರು ಇದ್ದಾರೆ. ಅವರು ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ನಾನು ಮೊದಲಿನಿಂದಲೂ ಡಿಕೆ ಶಿವಕುಮಾರ್ ಪರವಾಗಿ ಇದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

Key words: senior, asking, CM post,  MLA, Iqbal Hussain