Saturday, August 29, 2026

BDA Apartments

Home Front Page ಮೀಟಿಂಗ್ ಮುಕ್ತಾಯ: ನಾಯಕತ್ವ ಬದಲಾವಣೆ ವಿಚಾರ ಚರ್ಚಿಸಿಲ್ಲ ಎಂದ ವೇಣುಗೋಪಾಲ್

ಮೀಟಿಂಗ್ ಮುಕ್ತಾಯ: ನಾಯಕತ್ವ ಬದಲಾವಣೆ ವಿಚಾರ ಚರ್ಚಿಸಿಲ್ಲ ಎಂದ ವೇಣುಗೋಪಾಲ್

ನವದೆಹಲಿ,ಮೇ,26,2026 (www.justkannada.in): ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಸಭೆ ಮುಕ್ತಾಯವಾಗಿದೆ.

ಇಂದು ನವದೆಹಲಿಯ ಇಂದಿರಾಭವನದಲ್ಲಿ ಸಭೆ ನಡೆದಿದ್ದು, ಸಭೆ ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ರಾಜ್ಯಸಭೆ ವಿಧಾನ ಪರಿಷತ್ ಚುನಾವಣೆ ಬಗ್ಗೆ ಚರ್ಚೆಯಾಗಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಈಗ ಬರುತ್ತಿರುವ ವದಂತಿಗಳ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನಾಯಕತ್ವ ವಿಚಾರವಾಗಿ ಯಾವುದೇ ಚರ್ಚೆಯಾಗಿಲ್ಲ. ನಿಮ್ಮ ಊಹಾಪೋಹ ಯಾವುದೂ ಸತ್ಯವಲ್ಲ ಎಂದರು.

ಹೈವೋಲ್ಟೇಜ್ ಮೀಟಿಂಗ್ ಮುಗಿದಿದ್ದು ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್  ಇಂದಿರಾ ಭವನದಿಂದ ತೆರಳಿದ್ದಾರೆ.

Key words: Meeting, Congress, Venugopal, leadership change