Saturday, September 5, 2026

BDA Apartments

Home Front Page ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ಧ- ಸಚಿವ ಎಂ,ಬಿ ಪಾಟೀಲ್

ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ಧ- ಸಚಿವ ಎಂ,ಬಿ ಪಾಟೀಲ್

ನವದೆಹಲಿ,ಮೇ,26,2026 (www.justkannada.in): ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಸಂಬಂಧ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧ ಎಂದು ಕೈಗಾರಿಕಾ ಸಚಿವ ಎಂ,ಬಿ ಪಾಟೀಲ್ ತಿಳಿಸಿದ್ದಾರೆ.

ಇಂದು ದೆಹಲಿಯ ಇಂದಿರಾ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಹೈಕಮಾಂಡ್ ನಾಯಕರು ಮೀಟಿಂಗ್ ನಡೆಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ದ. ದೆಹಲಿಗೆ ಸಚಿವರು ಬರುವುದು ಸಹಜ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಸಭೆಯ ಅಜೆಂಡಾ ಏನು ಅಂತಾ ನಿರ್ಧಿಷ್ಟವಾಗಿ ಗೊತ್ತಿಲ್ಲ. ರಾಹುಲ್ ಗಾಂಧಿ ಏನು ಯೋಚನೆ ಮಾಢುತ್ತಿದ್ದಾರೆಂದು ಗೊತ್ತಿಲ್ಲ.  ಸಂಫುಟ ಪುನರ್ ರಚನೆಯೂ ಆಗಬಹುದು. ಸಿಎಂ ಡಿಸಿಎಂ ಜೊತೆಗೆ  ಚರ್ಚೆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂಧು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

Key words:  decision, high command, Meeting, Minister,  M.B. Patil