Friday, August 21, 2026

BDA Apartments

Home Cinema ಅಮೆಜಾನ್ ಪ್ರೈಂನಲ್ಲಿ ಕಿಚ್ಚ ‘ಪೈಲ್ವಾನ್’ ಅಬ್ಬರ, ಗೋಲ್ಡನ್ ಸ್ಟಾರ್ ‘ಗೀತಾ’ ಲವ್ ಸ್ಟೋರಿ

ಅಮೆಜಾನ್ ಪ್ರೈಂನಲ್ಲಿ ಕಿಚ್ಚ ‘ಪೈಲ್ವಾನ್’ ಅಬ್ಬರ, ಗೋಲ್ಡನ್ ಸ್ಟಾರ್ ‘ಗೀತಾ’ ಲವ್ ಸ್ಟೋರಿ

ಬೆಂಗಳೂರು, ಅಕ್ಟೋಬರ್ 30, 2019 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗೀತಾ’ ಹಾಗೂ ಕಿಚ್ಚನ ಪೈಲ್ವಾನ್ ಅಬ್ಬರನ್ನು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ನೋಡಬಹುದು.

ದೀಪಾವಳಿಯ ವಿಶೇಷವಾಗಿ ಈ ಎರಡೂ ಚಿತ್ರಗಳನ್ನು ಅಮೆಜಾನ್ ಪ್ರೈಂ ವಿಡೀಯೋದಲ್ಲಿ ಬಿಡುಗಡೆ ಮಾಡಲಾಗಿದೆ.

ಅಂದಹಾಗೆ ‘ಗೀತಾ’ ಚಿತ್ರವು ಸಹ ಇಲ್ಲಿಗೆ 2 ಕೋಟಿ 75 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು.
ಲವ್ ಸ್ಟೋರಿಯ ಜೊತೆಗೆ ಫ್ಯಾಮಿಲಿ ಕಥೆ ಹೊಂದಿರುವ ಈ ಚಿತ್ರದಲ್ಲಿ ಗಣೇಶ್ ರೊಂದಿಗೆ ಶಾನ್ವಿ ಶ್ರೀವಾತ್ಸವ್, ಪ್ರಯಾಗ, ಪಾರ್ವತಿ, ಸುಧಾರಾಣಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನು ಪೈಲ್ವಾನ್ ನಲ್ಲಿ ಕಿಚ್ಚನ ಅಬ್ಬವನ್ನು ಅಭಿಮಾನಿಗಳು ಮೊಬೈಲ್ ನಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ.