Thursday, August 20, 2026

BDA Apartments

Home Front Page ಪರಂ ಸಿಎಂ ಆಗಬೇಕೆಂಬ ರಾಜಣ್ಣ ಹೇಳಿಕೆ: ನನಗೇನು ತಪ್ಪು ಕಾಣಿಸಿಲ್ಲ ಎಂದ ಗೃಹ ಸಚಿವ ಪರಮೇಶ್ವರ್

ಪರಂ ಸಿಎಂ ಆಗಬೇಕೆಂಬ ರಾಜಣ್ಣ ಹೇಳಿಕೆ: ನನಗೇನು ತಪ್ಪು ಕಾಣಿಸಿಲ್ಲ ಎಂದ ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮೇ,21,2026 (www.justkannada.in):  ಸಿಎಂ ಬದಲಾವಣೆ ಮಾಡಿದರೇ ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂಬ ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿಕೆ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಪರಮೇಶ್ವರ್,  ರಾಜಣ್ಣ ನನ್ನ ಜಿಲ್ಲೆಯವರು ಆತ ನನ್ನ ಸ್ನೇಹಿತ. ಸ್ವಾಭಾವಿಕವಾಗಿ ಅಭಿಮಾನ ಇದ್ದೇ ಇರುತ್ತದೆ. ತುಮಕೂರಿಗೊಂದು ಅವಕಾಶ ಇದ್ದರೆ ಕೊಡಿ ಎಂದಿದ್ದಾರೆ ನಾವೆಲ್ಲ ಜೊತೆಯಲ್ಲೇ ಓದಿದ್ದೇವೆ. ರಾಜಣ್ಣ ಹೇಳಿಕೆಯಲ್ಲಿ ನನಗೇನು ತಪ್ಪು ಕಾಣಿಸಿಲ್ಲ ಎಂದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಎಲ್ಲದಕ್ಕೂ ಉತ್ತರ ಕೊಡಲು ಆಗಲ್ಲ. ಯಾವಾಗ ಏನು ಮಾಡಬೇಕೆಂದು ಹೈಕಮಾಂಡ್ ಗೆ ಗೊತ್ತಿದೆ. ಹೈಕಮಾಂಡ ತೀರ್ಮಾನ ಮಾಡುತ್ತಾರೆ. ಯಾವುದನ್ನೂ ನಿಗದಿ ಮಾಡಿ ಮುಖ್ಯಮಂತ್ರಿ ಮಾಡಿರುವುದಿಲ್ಲ ಎಂದರು.

Key words: Rajanna, statement, Home Minister, Parameshwar