Wednesday, September 30, 2026

BDA Apartments

Home Front Page NEET UG ಮರು ಪರೀಕ್ಷೆಗೆ ದಿನಾಂಕ ನಿಗದಿ

NEET UG ಮರು ಪರೀಕ್ಷೆಗೆ ದಿನಾಂಕ ನಿಗದಿ

ನವದೆಹಲಿ,ಮೇ,15,2026 (www.justkannada.in): ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರದ್ದುಗೊಂಡಿದ್ದ ನೀಟ್ ಯುಜಿ  ಮರು ಪರೀಕ್ಷೆಗೆ  ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ದಿನಾಂಕ ನಿಗದಿ ಮಾಡಿದೆ.

ಜೂನ್ 21 ರ ಭಾನುವಾರ ನೀಟ್ ಯುಜಿ ಪರೀಕ್ಷೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಘೋಷಣೆ ಮಾಡಿದೆ.

ಮೇ 3 ರಂದು ನಡೆದಿದ್ದ ನೀಟಿ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ರಾಜಸ್ತಾನದಲ್ಲಿ ಸೋರಿಕೆಯಾಗಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೆ ನೀಟ್ ಯುಜಿ ಪರೀಕ್ಷೆಯನ್ನ ರದ್ದುಪಡಿಸಲಾಗಿತ್ತು. ಕೇಂದ್ರ ಸರ್ಕಾರ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಿದೆ.NEET UG ಮರು ಪರೀಕ್ಷೆಗೆ ದಿನಾಂಕ ನಿಗದಿ jk02

Key words: Date, fixed, NEET UG, re-examination