ಮೈಸೂರು,ಮೇ,14,2026 (www.justkannada.in): ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನ ಹಾಸ್ಟೆಲ್ ಕಟ್ಟಡ ಹಾಗೂ ವಿಜ್ಞಾನ ಕಾಲೇಜು ಕಟ್ಟಡದ ಕಾಮಗಾರಿಯನ್ನ ಸಿಎಂ ಸಿದ್ದರಾಮಯ್ಯ ಪರಿಶೀಲಿಸಿದರು.
ಕರ್ನಾಟಕದ ದೂರದ ಪ್ರದೇಶಗಳ ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಮಹಾರಾಣಿ ಕಾಲೇಜು ಸಂಸ್ಥೆಯನ್ನು ಅವಲಂಬಿತರಾಗಿದ್ದು, ಪ್ರಸ್ತುತ ಮೂಲಸೌಕರ್ಯಗಳು, ವಿಶೇಷವಾಗಿ ಹಾಸ್ಟೆಲ್ ಸೌಲಭ್ಯಗಳು, ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತಿಲ್ಲವಾಲ್ಲ ಮತ್ತು ಕಾಲೇಜಿನ ಪಾರಂಪರಿಕ ಕಟ್ಟಡದ ಕೆಲ ಭಾಗವು ಶಿಥಿಲವಾಗಿ 2022ರಲ್ಲೇ ಕಟ್ಟಡದ ವಾಯುವ್ಯ ಭಾಗವು ಬಿದ್ದು ಹೋಗಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಅವರ ನೇತೃತ್ವದಲ್ಲಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ: ಹೆಚ್.ಸಿ. ಮಹದೇವಪ್ಪ,ಅವರ ಸಹಕಾರ ಹಾಗೂ ಶಾಸಕ ಕೆ. ಹರೀಶ್‌ಗೌಡ ಅವರ ವಿಶೇಷ ಆಸಕ್ತಿಯಿಂದ ಕಾಲೇಜು ಮತ್ತು ಹಾಸ್ಟೆಲ್ ಸೌಲಭ್ಯಗಳಿಗಾಗಿ 170.00 ಕೋಟಿ. ರೂ.ಗಳ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆ.
ಈ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಸಾಥ್ ನೀಡಿದರು.
ಕಾಮಗಾರಿ ವಿವರ
ಮಹಾರಾಣಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿರುವ ಹಾಲಿ ಪಾರಂಪರಿಕ ಕಟ್ಟಡ ಮತ್ತು ಗ್ರಂಥಾಲಯಗಳನ್ನು ಒಳಗೊಂಡಂತೆ ನವೀಕರಣ.
ಪಾರಂಪರಿಕ ಕಟ್ಟಡದ ಮುಂಭಾಗಕ್ಕೆ ಹೊಂದಿಕೆಯಾಗುವಂತೆ ಸೆಮಿನಾರ್ ಹಾಲ್ ಬ್ಲಾಕ್‌ಗಳ ನಿರ್ಮಾಣ. (4 ಸಂಖ್ಯೆ-120 ವಿದ್ಯಾರ್ಥಿಗಳ ಸಾಮರ್ಥ್ಯ)ಹಿಂಭಾಗದಲ್ಲಿ ನೂತನ ಕಟ್ಟಡದಲ್ಲಿ (ಜಿ+ 3) 20 ತರಗತಿ ಕೊಠಡಿ(60-ವಿದ್ಯಾರ್ಥಿಗಳ ಸಾಮರ್ಥ್ಯ).10 ಪ್ರಯೋಗಾಲಯಗಳು (30-ವಿದ್ಯಾರ್ಥಿಗಳ ಸಾಮರ್ಥ್ಯ)4 ವಿವಿದ್ದೋದ್ದೇಶ ಕೊಠಡಿಗಳ 100-ವಿದ್ಯಾರ್ಥಿಗಳ ಸಾಮರ್ಥ್ಯ.
ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜು ಹಾಸ್ಟೆಲ್ ಗಳು
ಎರಡು ಪ್ರತ್ಯೇಕ ಹಾಸ್ಟೆಲ್ ಬ್ಲಾಕ್ ಗಳು ಒಟ್ಟು : 1400 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುತ್ತದೆ. (ವಿಜ್ಞಾನ ವಿಭಾಗಕ್ಕೆ 700 & ಕಲಾ ವಿಭಾಗಕ್ಕೆ 700).
ಹೊಸ ಹಾಸ್ಟೆಲ್ ಕಟ್ಟಡವು 5 ಅಂತಸ್ತಿನ 4 ಟವರ್‌ಗಳಲ್ಲಿ ನಿರ್ಮಾಣವಾಗುತ್ತಿದ್ದು. ಒಟ್ಟು 306 ಕೊಠಡಿಗಳನ್ನು ಹೊಂದಿರುತ್ತದೆ. ಹಾಗೂ ಪಿ.ಜಿ ಬ್ಲಾಕ್ ಹಾಸ್ಟೇಲ್ ಕಟ್ಟಡ-48 ಕೊಠಡಿಗಳು ಸೇರಿದಂತೆ ಒಟ್ಟು 354 ಕೊಠಡಿಗಳು ಲಭ್ಯವಾಗುತ್ತದೆ.
500 ಜನ ಸಾಮರ್ಥ್ಯದ ಭೋಜನಾ ಹಾಲ್ ಗಳು ಅಡುಗೆ ಕೋಣೆ ಸೌಲಭ್ಯದೊಂದಿಗೆ ನಿರ್ಮಾಣವಾಗುತ್ತಿದೆ. ಕಟ್ಟಡದ ವಿನ್ಯಾಸವನ್ನು ಮೈಸೂರಿನ ಪಾರಂಪರಿಕ ಶೈಲಿ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟಾರೆ ಈ ಯೋಜನೆಯು ಕಾಲೇಜು ಹಾಗೂ ಮೈಸೂರಿನ ಐತಿಹಾಸಿಕ ಸಾರವನ್ನು ಸಂರಕ್ಷಿಸುವುದಲ್ಲದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳ ಅವಶ್ಯಕತೆಗಳನ್ನು ಪೂರೈಸುತ್ತವೆ. ಎಲ್ಲಾ ಕೊಠಡಿಗಳಿಗು ಪಿಠೋಪಕರಣಗಳ ವ್ಯವಸ್ಥೆ ಮಾಡಲಾಗುತ್ತಿದೆ.
Key words: CM Siddaramaiah, inspects ,construction work, Maharani College, Mysore







