ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲಿಗೆ ಅವಕಾಶ ಇಲ್ಲ- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು,ಮೇ,14,2026 (www.justkannada.in): ಇದೀಗ ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು ಶಾಲಾಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿ ಕೇಸರಿ ಶಾಲಿಗೆ ಅವಕಾಶ ನಿರಾಕರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಮತ್ತು ಹಿಂದೂಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲಾ ಸಮವಸ್ತ್ರ ಕುರಿತು 2022ರ ಆದೇಶ ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ,  ಶಾಲಾಕಾಲೇಜುಗಳಲ್ಲಿ ಕೇಸರಿ ಶಾಲು  ಹಾಕಿಕೊಂಡು ಬರಲು ಅವಕಾಶ ಇಲ್ಲ. ಜನಿವಾರ, ಶಿವದಾರ ಹಿಜಾಬ್ ಹಾಕಿಕೊಳ್ಳಬಹುದು.  ಶಾಲಾಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶವಿದೆ ಕೇಸರಿ ಶಾಲಿಗೆ ಅವಕಾವಿಲ್ಲ  ಎಂದಿದ್ದಾರೆ.

ಕೇಸರಿ ಪೇಟಕ್ಕೂ ಕೂಡ ಅವಕಾಶವಿಲ್ಲ ಮೊಲಿನಿಂದಲೂ ಯಾವ ಪೇಟಗಳಿತ್ತು ಆ ಪೇಟಗಳಿಗಷ್ಟೇ ಅವಕಾಶ. ಈಗ ಪೇಟಕ್ಕೆ ಬಣ್ಣದ ಬದಲಾವಣೆ ಮಾಡಿಕೊಂಡರೆ ಅವಕಾಶವಲ್ಲ. ನಾವು ಹಿಜಾಬ್ ಮಾತ್ರ ಅವಕಾಶ ಕೊಟ್ಟಿಲ್ಲ ಜನಿವಾರ ಶಿವದಾರ ದುದ್ರಾಕ್ಷಿ ಪೇಟಕ್ಕೂ ಅವಕಾಶ ಕೋಟ್ಟಿದ್ದೇವೆ. ಆದರೆ ಹೊಸ ರೂಪದ ಪೇಟಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದರು.

Key words: Saffron shawls, schools, colleges, CM Siddaramaiah, Mysore