ಚೆನ್ನೈ,ಮೇ,13,2026 (www.justkannada.in): ತಮಿಳುನಾಡಿನ ಸಿಎಂ ಜೋಸೆಫ್ ವಿಜಯ್ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ್ದಾರೆ.
ಇಂದು ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಕ್ರಿಯೆ ನಡೆಯಿತು. ಈ ವೇಳೆ ಸಿಎಂ ವಿಜಯ್ ನೇತೃತ್ವದ ಸರ್ಕಾರಕ್ಕೆ 144 ಶಾಸಕರು ಬೆಂಬಲ ಸೂಚಿಸಿದ್ದು ಈ ಮೂಲಕ ವಿಜಯ್ ವಿಶ್ವಾಸ ಮತ ಗೆದ್ದಿದ್ದಾರೆ. ವಿಜಯ್ ವಿರುದ್ದವಾಗಿ 22 ಶಾಸಕರು ಮತ ಚಲಾಯಿಸಿದರು.
ವಿಜಯ್ ಸರ್ಕಾರಕ್ಕೆ ಕಾಂಗ್ರೆಸ್ 5, ವಿಸಿಕೆಯ ಇಬ್ಬರು, ಸಿಪಿಐನ ಇಬ್ಬರು, ಸಿಪಿಐ(ಎಂ)ನ ಇಬ್ಬರು ಐಯುಎಂಎಲ್ ಪಕ್ಷದ ಇಬ್ಬರು ಶಾಸಕರು ಸೇರಿದಂತೆ 144 ಶಾಸಕರು ಬೆಂಬಲಿಸಿದರು. ಅಣ್ಣಡಿಎಂಕೆ ರೆಬಲ್ ಬಣದ 25 ಶಾಸಕರು ಸಿಎಂ ವಿಜಯ್ ಗೆ ಬೆಂಬಲ ಸೂಚಿಸಿದರು. ಈ ಮೂಲಕ ಸಿಎಂ ವಿಜಯ್ ಸರ್ಕಾರ 6 ತಿಂಗಳ ಕಾಲ ಸೇಫ್ ಆಗಿದೆ. 
Key words: Tamil Nadu CM, Vijay, Prove majority, Support, 144 MLAs







