Monday, September 28, 2026

BDA Apartments

ಸ್ಯಾಂಡಲ್ ವುಡ್ ನಟ ‘ದಿಲೀಪ್ ರಾಜ್’ ನಿಧನ BDA JK_Adv BDA Adv
Home Cinema ಸ್ಯಾಂಡಲ್ ವುಡ್ ನಟ ‘ದಿಲೀಪ್ ರಾಜ್’ ನಿಧನ

ಸ್ಯಾಂಡಲ್ ವುಡ್ ನಟ ‘ದಿಲೀಪ್ ರಾಜ್’ ನಿಧನ

ಬೆಂಗಳೂರು,ಮೇ,13,2026 (www.justkannada.in): ಸ್ಯಾಂಡಲ್ ವುಡ್ ನಟ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್(47)  ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಗಿನ ಜಾವ ನಟ ದಿಲೀಪ್ ರಾಜ್‌ ಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೇ ದಿಲೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ. ದಿಲೀಪ್‌ ನಿಧನಕ್ಕೆ ಕನ್ನಡ ಚಿತ್ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.ಸ್ಯಾಂಡಲ್ ವುಡ್ ನಟ 'ದಿಲೀಪ್ ರಾಜ್' ನಿಧನ heart attack

ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ದಿಲೀಪ್ ರಾಜ್ ಖ್ಯಾತಿ ಪಡೆದಿದ್ದರು. ಸಿನಿಮಾ ಮತ್ತು ಟಿವಿ ಎರಡರಲ್ಲೂ ನಟ, ನಿರ್ಮಾಪಕ ದಿಲೀಪ್ ರಾಜ್ ಗುರುತಿಸಿಕೊಂಡಿದ್ದರು. 2005ರಲ್ಲಿ ಬಿಡುಗಡೆಯಾದ ಬಾಯ್‌ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದರು. ಮಿಲನ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದರು.justkannada jk02

ಟೋನಿ, ಭೈರವಿ, ಯೂಟರ್ನ್, ಸುಗ್ರೀವ, ಗೆಳೆಯ, ಸೇರಿದಂತೆ 28 ಚಿತ್ರಗಳಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ. ಮನೆಯೊಂದು ಮೂರು ಬಾಗಿಲು, ರಥಸಪ್ತಮಿ, ಪ್ರೀತಿಗಾಗಿ ಧಾರವಾಹಿಗಳಲ್ಲೂ ನಟಿಸಿದ್ದರು.

Key words: Sandalwood, actor, Dilip Raj, passes away