ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ- ಪ್ರಧಾನಿ ಮೋದಿಗೆ ಸಚಿವ ಮಧು ಬಂಗಾರಪ್ಪ ತಿರುಗೇಟು

ಬೆಂಗಳೂರು,ಮೇ,12,2026 (www.justkannada.in): ಪೆಟ್ರೋಲ್ ಡೀಸೆಲ್, ಅಡುಗೆ ಎಣ್ಣೆ ಮಿತವಾಗಿ ಬಳಸಿ ,ಶಾಲೆಗಳಲ್ಲಿ ಆನ್ ಲೈನ್ ತರಗತಿಗಳನ್ನ ನಡೆಸಿ ಎಂದು ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, ಇಂದಿರಾಗಾಂಧಿ ಕಾಲದಲ್ಲಿ ಯುದ್ದಆಗಿಲ್ವಾ?  ಮೋದಿ ಅವರು ಹೇಳಿದ ತಕ್ಷಣ  ಮಾಡಬೇಕು ಅಂತೇನಿಲ್ಲ. ಸಿಎಂ ಇದ್ದಾರೆ. ಕಾನೂನು ಇದೆ ನಾವೆಲ್ಲರೂ ಚರ್ಚೆ ಮಾಡುತ್ತೇವೆ

ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮುಖ್ಯ. ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಗೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು.

Key words: Minister, Madhu Bangarappa, Prime Minister, Modi