ಬಿಟ್ ಕಾಯಿನ್ ಹಗರಣ: ಶ್ರೀಕಿ ಸೇರಿ ಮೂವರ ಬಂಧನ

ಬೆಂಗಳೂರು,ಮೇ,9,2026 (www.justkannada.in): ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರನ್ನು ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ಬಂಧಿಸಿದ್ದಾರೆ.

ಶ್ರೀಕಿ,  ರಾಬಿನ್ ಖಂಡೇವಾಲ, ಸುನೀಶ್ ಹೆಗ್ಡೆ ಬಂಧಿತರು.  ಕೆಲ ವರ್ಷಗಳಿಂದ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ  ಇಡಿ ಅಧಿಕಾರಿಗಳು ಏಪ್ರಿಲ್ 20 ರಂದು ಶ್ರೀಕಿ ಮತ್ತು ಮೊಹಮ್ಮದ್ ನಲಪಾಡ್, ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಮೊಮ್ಮಗ ಹಕೀಬ್ ನಿವಾಸ ಸೇರಿದಂತೆ 12 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಇದೀಗ ಶ್ರೀಕಿ ಬಂಧನದ ಬೆನ್ನಲ್ಲೇ ಮೊಹಮ್ಮದ್ ನಲಪಾಡ್ ಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಶ್ರೀಕಿ ಸೇರಿದಂತೆ ಇತರೆ ಆರೋಪಿಗಳ ಜೊತೆ ಮೊಹಮ್ಮದ್ ನಲಪಾಡ್ ಸಂಪರ್ಕದಲ್ಲಿರುವ ಆರೋಪವಿದೆ.

Key words: Bitcoin Scam, Shriki, Three, Arrested